Publish Date: Wed, 15 Jul 2020 (10:14 IST)
Updated Date: Thu, 16 Jul 2020 (14:39 IST)
ಬೆಳಗಾವಿ : ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆಗೆ ಕೊರೊನಾ ಸೋಂಕು ತಗುಲಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಅವರು ಫೇಸ್ ಬುಕ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿ ಮಾಹಿತಿ ನೀಡಿದ್ದು, ನನ್ನ ಬರ್ತ್ ಡೇ ದಿನ ಸಂಜೆಯೇ ವರದಿ ಬಂದಿದೆ. ಸಂಭಾವ್ಯ ಸೋಂಕು ಎಂದು ರಿಪೋರ್ಟ್ ತೋರಿಸುತ್ತಿದೆ. ಜನ್ಮದಿನ ಆಚರಿಸಿಲ್ಲವೆಂದು ಕೆಲವರು ಬೇಸರವಾಗಿದ್ದಾರೆ. ಆದ್ರೆ ಬರ್ತ್ ಡೇ ಆಚರಿಸಿಕೊಂಡಿದ್ದರೆ ಅನಾಹುತವಾಗ್ತಿತ್ತು.
ನನ್ನ ಜನ್ಮದಿನ ಆಚರಣೆ ಮಾಡದಿರುವುದಕ್ಕೆ ಖುಷಿ ಇದೆ. 4 ದಿನಗಳಿಂದ ನಾನು ಹೋಂ ಕ್ವಾರಂಟೈನ್ ಆಗಿದ್ದೇನೆ. ಬೇರೆ ಕಾಯಿಲೆಯಂತೆ ಕೊರೊನಾ ಸಹ ಒಂದು ಕಾಯಿಲೆ. ಕೊರೊನಾಗೆ ಹೆದರಿಕೊಳ‍್ಳದೆ ಕಾಳಜಿ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.