Publish Date: Wed, 15 Jul 2020 (09:28 IST)
Updated Date: Wed, 15 Jul 2020 (09:30 IST)
Normal
0
false
false
false
EN-US
X-NONE
X-NONE
ಮುಂಬೈ : ಕೊರೊನಾ ಸೋಂಕಿನ ಜೊತೆಗೆ ಹೋರಾಡಲು ವೃದ್ಧರಿಗೆ ಅಸಾಧ್ಯ ಎಂದು ಹೇಳಲಾಗುತ್ತಿತ್ತು. ಆದರೆ ಈ ವಿಚಾರವನ್ನು ಮುಂಬೈನಲ್ಲಿರುವ 101 ವರ್ಷದ ವೃದ್ಧರೊಬ್ಬರು ಸುಳ್ಳು ಮಾಡಿದ್ದಾರೆ.
ಹೌದು. 101 ವರ್ಷದ ಅರ್ಜುನ್ ಗೋವಿಂದ್ ನರಿಂಗ್ರೆಕರ್ ಎಂಬುವವರು ಕೊರೊನಾ ಸೋಂಕಿಗೆ ಒಳಗಾಗಿದ್ದರು. ಅವರಿಗೆ ಮುಂಬೈನ ಹಿಂದೂ ಹೃದಯ ಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಈ ವೃದ್ಧರು ಕೊರೊನಾ ರೋಗದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದಾರೆ.
ಅಲ್ಲದೇ ಡಿಸ್ಚಾರ್ಚ್ ಆಗುವ ಹಿಂದಿನ ದಿನ ತಮ್ಮ 101ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಆ ಮೂಲಕ ವೃದ್ಧರು ಕೂಡ ಮಹಾಮಾರಿ, ಮಾರಣಾಂತಿಕ ಕೊರೊನಾ ವೈರಸ್ ವಿರುದ್ಧ ಹೋರಾಡಿ ಗೆಲ್ಲಬಹುದು ಎಂಬುದನ್ನು ಇವರು ತೋರಿಸಿಕೊಟ್ಟಿದ್ದಾರೆ.
pavithra
Publish Date: Wed, 15 Jul 2020 (09:28 IST)
Updated Date: Wed, 15 Jul 2020 (09:30 IST)