Publish Date: Sat, 07 Oct 2017 (10:04 IST)
Updated Date: Sat, 07 Oct 2017 (10:06 IST)
ನವದೆಹಲಿ: ಅತ್ಯಾಚಾರ ಆರೋಪದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಡೇರಾ ಮುಖ್ಯಸ್ಥ ಬಾಬಾ ರಾಮ್ ರಹೀಂ ಸಿಂಗ್ ಶಿಕ್ಷೆ ವಿರೋಧಿಸಿ ಗಲಭೆ ಎಬ್ಬಿಸಲು ಆತನ ಪುತ್ರಿ ಹನಿಪ್ರೀತ್ 1.25 ಕೋಟಿ ರೂ. ಖರ್ಚು ಮಾಡಿದ್ದಳಂತೆ!
ಸದ್ಯಕ್ಕೆ ಡೇರಾ ಬಾಬಾ ತಪ್ಪಿಸಿಕೊಳ್ಳಲು ಸಹಾಯ ಮಾಡಲೆತ್ನಿಸಿದ ಆರೋಪದಲ್ಲಿ ಬಂಧಿತಳಾಗಿರುವ ಹನಿಪ್ರೀತ್ ಡೇರಾ ಬೆಂಬಲಿಗರಿಂದ ದಾಂಧಲೆ ಏರ್ಪಡಿಸಲು ಕೋಟಿ ರೂ. ಚೆಕ್ ನೀಡಿದ್ದಳಂತೆ. ಆಗಸ್ಟ್ 25 ರಂದು ಬಾಬಾಗೆ ಶಿಕ್ಷೆ ಘೋಷಣೆಯಾದ ಬಳಿಕ ಹರಿಯಾಣ ಮತ್ತು ಪಂಜಾಬ್ ನಲ್ಲಿ ವ್ಯಾಪಕ ಹಿಂಸಾಚಾರ ನಡೆದಿತ್ತು.
ಇದರ ಮಾಸ್ಟರ್ ಮೈಂಡ್ ಈಕೆಯೇ ಎಂಬುದು ಇದೀಗ ಸಾಬೀತಾಗಿದೆ. ಡೇರಾ ಪಂಚಕುಲಾದ ಮುಖ್ಯಸ್ಥ ಚಮಕುರ್ ಸಿಂಗ್ ಗೆ ಈಕೆ ಭಾರೀ ಮೊತ್ತದ ಹಣ ನೀಡಿದ್ದಳಂತೆ. ಪೊಲೀಸ್ ವಶದಲ್ಲಿರುವ ರಾಕೇಶ್ ಕುಮಾರ್ ಎಂಬ ಹನಿಪ್ರೀತ್ ಸಹಾಯಕ ಈ ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ