Select Your Language

Notifications

webdunia
webdunia
webdunia
webdunia

ಬಿಎಸ್‌ಎಫ್‌ ಪಡೆಗಳಿಂದ ಪಾಕಿಸ್ತಾನದ ಮಹಿಳಾ ಭಯೋತ್ಪಾದಕಿ ಹತ್ಯೆ

ಬಿಎಸ್‌ಎಫ್‌ ಪಡೆಗಳಿಂದ ಪಾಕಿಸ್ತಾನದ ಮಹಿಳಾ ಭಯೋತ್ಪಾದಕಿ ಹತ್ಯೆ
ಗುರುದಾಸ್‌ಪುರ್: , ಗುರುವಾರ, 5 ಅಕ್ಟೋಬರ್ 2017 (18:52 IST)
ಅಂತಾರಾಷ್ಟ್ರೀಯ ಗಡಿಯ ಬಳಿ ಬಿಎಸ್‌ಎಫ್ ಯೋಧರ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಭಾರತದ ಗಡಿಯೊಳಗೆ ನುಗ್ಗುತ್ತಿದ್ದ ಮಹಿಳಾ ಭಯೋತ್ಪಾದಕಿಯನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ.

ಪಾಕಿಸ್ತಾನ ಮೂಲದ ಮಹಿಳೆ, ಅಂತಾರಾಷ್ಟ್ರೀಯ ಗಡಿರೇಖೆಯಾದ ಡೇರಾ ಬಾಬಾ ನಾನಕ್ ಸೆಕ್ಟರ್‌‌ನಿಂದ ಭಾರತದೊಳಗೆ ನುಗ್ಗಲು ಪ್ರಯತ್ನಿಸಿದಾಗ, ಭದ್ರತಾ ಪಡೆಗಳು ದೇಶದೊಳಗೆ ನುಸುಳದಂತೆ ಎಚ್ಚರಿಕೆ ನೀಡಿವೆ. ಆದಾಗ್ಯೂ, ಮಹಿಳೆ ದೇಶದ ಗಡಿಯೊಳಗೆ ನುಗ್ಗಲು ಮುಂದುವರಿಸಿದಾಗ ಭದ್ರತಾ ಪಡೆಗಳು ಗುಂಡು ಹಾರಿಸಿ ಹತ್ಯೆಗೈದಿವೆ. 
 
ಕಳೆದ ರಾತ್ರಿ ಘಾನಿಯಾ ಕೆ ಗಡಿಯ ಹೊರವಲಯದಲ್ಲಿ ಗಸ್ತು ನಡೆಸುತ್ತಿದ್ದ ಬಿಎಸ್ಎಫ್ ಪಡೆಗಳಿಗೆ ಮುಳ್ಳುತಂತಿ ಬೇಲಿಯಲ್ಲಿ ಅನುಮಾನಾಸ್ಪದ ಚಲನೆ ಪತ್ತೆಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 
ಭದ್ರತಾ ಪಡೆಗಳು ಮಹಿಳೆಗೆ ಶರಣಾಗುವಂತೆ ಎಚ್ಚರಿಕೆ ನೀಡಿದ್ದವು. ಆದರೆ, ಭದ್ರತಾ ಪಡೆಗಳ ಆದೇಶವನ್ನು ನಿರ್ಲಕ್ಷಿಸಿ ಮುಂದುವರಿದಿದ್ದರಿಂದ ಗುಂಡು ಹಾರಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
 
ಪಾಕಿಸ್ತಾನದ ರೇಂಜರ್ಸ್ ಮಹಿಳೆಯ ದೇಹದ ಸ್ವೀಕರಿಸಲು ನಿರಾಕರಿಸಿದರು, ಅಧಿಕೃತ ಹೇಳಿದರು, ಇದು ನಂತರ ಕೊನೆಯ ಆಚರಣೆಗಳಿಗಾಗಿ ಡೇರಾ ಬಾಬಾ ನಾನಕ್ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಯಿತು ಎಂದು ಸೇರಿಸುವ.
 
ಪಾಕಿಸ್ತಾನದ ಸೇನಾಪಡೆಗಳು ಮಹಿಳೆಯ ಶವವನ್ನು ಸ್ವೀಕರಿಸಲು ನಿರಾಕರಿಸಿದ್ದರಿಂದ ಅಂತಿಮ ಸಂಸ್ಕಾರ ನಡೆಸಲು ಡೇರಾ ಬಾಬಾ ನಾನಕ್ ಪೊಲೀಸ್ ಠಾಣೆಗೆ ಮಹಿಳೆಯ ಶವವನ್ನು ಒಪ್ಪಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಎಸ್‌ಸಿ,ಎಸ್‌ಟಿ ಸಮುದಾಯಗಳಿಗೆ ಶೇ.70 ರಷ್ಟು ಮೀಸಲಾತಿ: ಸಿಎಂ