Publish Date: Tue, 26 Sep 2017 (09:23 IST)
Updated Date: Tue, 26 Sep 2017 (09:25 IST)
ನವದೆಹಲಿ: ಡೇರಾ ಸಚ್ ಮುಖ್ಯಸ್ಥ ಬಾಬಾ ರಾಮ್ ರಹೀಂ ಸಿಂಗ್ ತನ್ನ ದತ್ತು ಪುತ್ರಿಯನ್ನೂ ಕಾಮದ ಕಣ್ಣಿನಿಂದ ನೋಡುತ್ತಿದ್ದ ಎಂದು ಇತ್ತೀಚೆಗೆ ಆಕೆಯ ಪತಿಯೇ ನೀಡಿದ್ದ ಹೇಳಿಕೆ ಸರಿ ಎಂದು ಡೇರಾ ಮೂಲಗಳೇ ಹೇಳಿವೆ.
ಹನಿಪ್ರೀತ್ ಮೇಲೆಯೂ ಬಾಬಾ ಅತ್ಯಾಚಾರವೆಸಗಿದ್ದ ಎಂದು ಡೇರಾ ಹಿಂಬಾಲಕರೊಬ್ಬರು ಹೇಳಿಕೊಂಡಿದ್ದಾರೆ. ಇದರೊಂದಿಗೆ ಅಪ್ಪ ಮಗಳ ನಡುವಿನ ಅಕ್ರಮ ಸಂಬಂಧ ನಿಜ ಎಂದು ಹೆಸರು ಹೇಳಲಿಚ್ಛಿಸದ ಡೇರಾ ಹಿಂಬಾಲಕರೊಬ್ಬರು ಆಂಗ್ಲ ವಾಹಿನಿಯೊಂದಕ್ಕೆ ಹೇಳಿದ್ದಾರೆ.
ಡೇರಾ ಬಾಬಾನ ಖಾಸಗಿ ಬಂಗಲೆ ಗುಫಾದಲ್ಲಿ ಈ ಕೃತ್ಯ ನಡೆಯುತ್ತಿತ್ತು ಎಂದು ಅವರು ಹೇಳಿದ್ದಾರೆ. ಇದರೊಂದಿಗೆ ಇತ್ತೀಚೆಗೆ ಹನಿಪ್ರೀತ್ ಪತಿ ಈ ತಂದೆ-ಮಗಳ ಜೋಡಿ ನಡುವೆ ಸೆಕ್ಸ್ ಸಂಬಂಧವಿತ್ತು ಎಂದು ಹೇಳಿರುವುದಕ್ಕೆ ಮತ್ತಷ್ಟು ಪುರಾವೆ ದೊರಕಿದಂತಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ