Select Your Language

Notifications

webdunia
webdunia
webdunia
webdunia

ಪತಿಯನ್ನು ದುಷ್ಟಶಕ್ತಿಯಿಂದ ರಕ್ಷಿಸುವ ನೆಪದಲ್ಲಿ ನವವಧುವಿನ ಮೇಲೆ ರೇಪ್

ಪತಿಯನ್ನು ದುಷ್ಟಶಕ್ತಿಯಿಂದ ರಕ್ಷಿಸುವ ನೆಪದಲ್ಲಿ ನವವಧುವಿನ ಮೇಲೆ ರೇಪ್
ಲಕ್ನೋ , ಸೋಮವಾರ, 25 ಸೆಪ್ಟಂಬರ್ 2017 (12:59 IST)
ಪತಿಯನ್ನು ದುಷ್ಟಶಕ್ತಿಯಿಂದ ರಕ್ಷಿಸಿ ಸಾವಿನಿಂದ ಕಾಪಾಡುವ ನೆಪದಲ್ಲಿ ಪ್ರಥಮ ರಾತ್ರಿಯಂದು ಮಾಂತ್ರಿಕ ಮತ್ತು ಮೈದುನ ನವವಧುವಿನ ಮೇಲೆ ಅತ್ಯಾಚಾರವೆಸಗಿದ ಹೇಯ ಘಟನೆ ವರದಿಯಾಗಿದೆ. 
ತಾಂತ್ರಿಕನ ಸಲಹೆ ಮೇರೆಗೆ ಅತ್ಯಾಚಾರವೆಸಗಲು ಅತ್ತೆ ಮತ್ತು ಮಾವ ಒಪ್ಪಿಗೆ ನೀಡಿದ್ದಾರೆ ಎಂದು ಅತ್ಯಾಚಾರಕ್ಕೊಳಗಾದ ನವವಧು ಮಾರನೇ ದಿನ ಮಾಹಿತಿ ನೀಡಿದ್ದಾಳೆ.
 
ಲಿಸಾರಿ ಗೇಟ್ ಪ್ರದೇಶದ ನಿವಾಸಿಯಾಗಿರುವ ಯುವತಿಯನ್ನು ಹಾಪುರ್ ಜಿಲ್ಲೆಯ ಪಿಲಾಖ್ವಾ ಪಟ್ಟಣದಲ್ಲಿ ಜವಳಿ ವರ್ತಕನಿಗೆ ಸೆಪ್ಟೆಂಬರ್ 15 ರಂದು ವಿವಾಹ ಮಾಡಿಕೊಡಲಾಗಿತ್ತು. ವಿವಾಹ ಕಾರ್ಯಕ್ರಮದ ನಂತರ ಆಕೆಗೆ ಮತ್ತುಬರಿಸುವ ತಂಪು ಪಾನೀಯ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ. 
 
ಪ್ರಥಮ ರಾತ್ರಿಯಿಂದ ಪತಿಯ ಬದಲಿಗೆ ಮಾಂತ್ರಿಕ ಮತ್ತು ಮೈದುನ ಇಬ್ಬರು ಪ್ರಜ್ಞೆ ಕಳೆದುಕೊಂಡಿದ್ದ ನವವಧುವಿನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಮರುದಿನ ಪ್ರಜ್ಞೆ ಮರಳಿದ ನಂತರ, ನವವಧು ಮಾವನ ಮನೆಯವರಿಗೆ ರಾತ್ರಿ ನಡೆದ ಘಟನೆಯ ಬಗ್ಗೆ ತಿಳಿಸಿದ್ದಾಳೆ. ತಾಂತ್ರಿಕನ ಸಲಹೆ ಮೇರೆಗೆ ಆ ರೀತಿ ಮಾಡಲಾಗಿದೆ. ಪತಿ ಮೊದಲನೇ ರಾತ್ರಿಯಂದು ಪತ್ನಿಯ ಜೊತೆಗಿದ್ದಲ್ಲಿ ಸಾವನ್ನಪ್ಪುವುದಾಗಿ ತಾಂತ್ರಿಕ ತಿಳಿಸಿದ್ದ ಎಂದು ಅತ್ತೆ, ಮಾವ ತಿಳಿಸಿದ್ದಾರೆ ಎನ್ನಲಾಗಿದೆ.
 
ಘಟನೆ ನಡೆದು ಒಂದು ವಾರದ ನಂತರ ನವವಧು ಮತ್ತು ಆಕೆಯ ಕುಟುಂಬದವರು ಲಿಸಾರಿ ಗೇಟ್ ಪೊಲೀಸ್ ಠಾಣೆಯಲ್ಲಿ ಮಾಂತ್ರಿಕ ಮತ್ತು ಪತಿಯ ಸಹೋದರ, ಮಾವನ ಮನೆಯವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ.
 
ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಚಾಮುಂಡಿ ತಾಯಿಗೆ ಬೆಳ್ಳಿ ಆನೆಗಳನ್ನ ಸಮರ್ಪಿಸಿದ ಡಿ.ಕೆ. ಶಿವಕುಮಾರ್