Select Your Language

Notifications

webdunia
webdunia
webdunia
webdunia

ದೇಶದ ಜನತೆಗೆ ಜಿಎಸ್ ಟಿ ಧಮಾಕ: ಯಾವೆಲ್ಲಾ ವಸ್ತುಗಳ ಬೆಲೆ ಇಳಿಕೆ

GST Update

Krishnaveni K

ನವದೆಹಲಿ , ಗುರುವಾರ, 4 ಸೆಪ್ಟಂಬರ್ 2025 (09:14 IST)
Photo Credit: X
ನವದೆಹಲಿ: ದೇಶದ ಜನತೆಗೆ ಕೇಂದ್ರ ಸರ್ಕಾರ ಜಿಎಸ್ ಟಿ ಧಮಾಕಾ ಆಫರ್ ನೀಡಿದೆ. ದೀಪಾವಳಿ ವೇಳೆಗೆ ಜನತೆಗೆ ಉಡುಗೊರೆ ನೀಡಲಿದ್ದೇವೆ ಎಂದಿದ್ದ ಪ್ರಧಾನಿ ಮೋದಿ ಅದರಂತೆ ನಡೆದುಕೊಂಡಿದ್ದಾರೆ. ಅದರಂತೆ ಯಾವೆಲ್ಲಾ ವಸ್ತುಗಳಿಗೆ ಬೆಲೆ ಇಳಿಕೆಯಾಗಲಿದೆ ಇಲ್ಲಿದೆ ವಿವರ.

ಎರಡು ದಿನಗಳ ಜಿಎಸ್ ಟಿ ಮಂಡಳಿ ಸಭೆಯಲ್ಲಿ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಜಿಎಸ್ ಟಿ ನಾಲ್ಕು ಸ್ಲ್ಯಾಬ್ ಗಳಿಂದ ಎರಡು ಸ್ಲ್ಯಾಬ್ ಗಳಿಗೆ ಇಳಿಕೆ ಮಾಡಲಾಗಿದೆ. ಇದರಿಂದ ಹಲವು ವಸ್ತುಗಳ ಮೇಲಿನ ಜಿಎಸ್ ಟಿ ರೂಪದಲ್ಲಿ ಬದಲಾವಣೆಯಾಗಿದ್ದು, ಬೆಲೆ ಇಳಿಕೆಯಾಗಲಿದೆ.

ಇನ್ನು 5%, 18% ಜಿಎಸ್ ಟಿ ಮಾತ್ರ ಜಾರಿಯಲ್ಲಿರಲಿದೆ. ಕೇವಲ 12% ಮತ್ತು 28% ಸ್ಲ್ಯಾಬ್ ರದ್ದಾಗಲಿದೆ. ಆರೋಗ್ಯ, ಜೀವ ರಕ್ಷಕ ಔಷಧಿ, ಜೀವ ವಿಮೆ, ಕ್ಷೀರೋತ್ಪನ್ನ ಸೇರಿ ಹಲವು ವಸ್ತುಗಳಿಗೆ ಶೂನ್ಯ ಜಿಎಸ್ ಟಿ ಜಾರಿಗೆ ಬರಲಿದೆ. ಹೀಗಾಗಿ ಈ ವಸ್ತುಗಳ ಬೆಲೆ ಇಳಿಕೆಯಾಗಲಿದೆ.  ಇದರಿಂದ ಬಡ ರೋಗಿಗಳಿಗೆ ಸಹಾಯವಾಗಲಿದೆ.  ಆದರೆ ತಂಬಾಕು ವಸ್ತು, ಐಷಾರಾಮಿ ಕಾರು, ಬೈಕು, ವಿಮಾನ, ಕ್ರಮ ಬದ್ಧ ಜೂಜು ಸೇರಿದಂತೆ 7 ವಸ್ತುಗಳಿಗೆ 40% ಜಿಎಸ್ ಟಿ ಬೀಳಲಿದೆ. ಸೆಪ್ಟೆಂಬರ್ 22 ರಿಂದಲೇ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ.

ಶೂನ್ಯ ಜಿಎಸ್ ಟಿ ಯಾವುದಕ್ಕೆ?
33 ಜೀವ ರಕ್ಷಕ ಔಷಧಿಗಳು, ಕ್ಯಾನ್ಸರ್ ಔಷಧಿಗಳು, ಅಪರೂಪದ ಖಾಯಿಲೆಗೆ ಬೇಕಾದ ಔಷಧಿಗಳು. ವೈಯಕ್ತಿಕ ಜೀವ ವಿಮೆ, ಆರೋಗ್ಯ ವಿಮೆಗಳ ಪ್ರೀಮಿಯರ್ ಗಳು. ನಕ್ಷೆ, ಚಾರ್ಟ್ ಗಳು, ಗ್ಲೋಬ್ ಪೆನ್ಸಿಲ್, ಶಾರ್ಪ್ ನರ್, ಕ್ರೆಯಾನ್, ಎಕ್ಸರ್ ಸೈಝ್ ಬುಕ್ ಗಳು, ಇರೇಸರ್. ಹಾಲು (ಕುದಿಸಿ ಸಂಸ್ಕರಿಸಿದ), ಪನೀರ್, ಪ್ಯಾಕೇಜ್ ಮಾಡಲಾದ ಪಿಜ್ಜಾ ಬ್ರೆಡ್, ಖಾಖ್ರಾ, ಚಪಾತಿ ಅಥವಾ ರೋಟಿಯಂತಹ ವಸ್ತುಗಳು.

ಶೇ.5 ಜಿಎಸ್ ಟಿ ವಸ್ತುಗಳು
ಕೇಶ ತೈಲ, ಶ್ಯಾಂಪೂ, ಟೂತ್ ಪೇಸ್ಟ್, ಟೂತ್ ಬ್ರಷ್, ಶೇವಿಂಗ್ ಕ್ರೀಮ್, ಬೆಣ್ಣೆ ತುಪ್ಪ, ಚೀಸ್, ಕುರುಕಲು ತಿಂಡಿಗಳು, ಪಾತ್ರೆಗಳು, ಡೈರಿ ಸ್ಟಡ್. ಹೊಲಿಗೆ ಯಂತ್ರ, ಬಿಡಿ ಭಾಗಗಳು, ಥರ್ಮೋಮೀಟರ್, ಮೆಡಿಕಲ್ ಗ್ರೇಡ್ ಆಮ್ಲಜನಕ, ರೋಗ ಪತ್ತೆ ಕಿಟ್, ಗ್ಲುಕೋಮೀಟರ್, ಪರೀಕ್ಷಾ ಸ್ಟ್ರಿಪ್, ಕನ್ನಡ, ಟ್ರ್ಯಾಕ್ಟರ್ ಟೈರ್, ಕೀಟನಾಶಕ, ಸೂಕ್ಷ್ಮ ಪೋಷಕಾಂಶಗಳು, ಹನಿ ನೀರಾವರಿ ವ್ಯವಸ್ಥೆ, ಸ್ಪಿಂಕ್ಲರ್ ಗಳು, ಕೃಷಿ, ತೋಟಗಾರಿಕೆಯಲ್ಲಿ ಬಳಸುವ ಮಣ್ಣು ಹದಗೊಳಿಸುವ ಯಂತ್ರಗಳು.
ಶೇ.18 ಜಿಎಸ್ ಟಿ ವಸ್ತುಗಳು
ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಎಲ್ ಪಿಜಿ, ಸಿಎನ್ ಸಿ ಕಾರುಗಳು (1200 ಸಿಸಿ ಮತ್ತು 4000 ಎಂಎಂ ಮೀರದ) ತ್ರಿ ಚಕ್ರ ವಾಹನಗಳು, ಮೋಟಾರು ಸೈಕಲ್ ಗಳು (350 ಸಿಸಿ ಮತ್ತು ಅದಕ್ಕಿಂತ ಕೆಳಗಿನ ಸಾಮರ್ಥ್ಯದ) ಸರಕು ಸಾಗಣೆ ಮೋಟಾರು ವಾಹನ, ಎಸಿ, ಟಿವಿ (32 ಇಂಚಿಗಿಂತ ಮೇಲ್ಪಟ್ಟ) ಮಾನಿಟರ್, ಪ್ರಾಜೆಕ್ಟರ್ ಗಳು, 1800 ಸಿಸಿ ಮೀರಿದ ಟ್ರ್ಯಾಕ್ಟರ್ ಗಳು.

ಶೇ.40 ಜಿಎಸ್ ಟಿ ವಸ್ತುಗಳು
ಪಾನ್ ಮಸಾಲ, ಸಿಗರೇಟ್, ಗುಟ್ಕಾ, ತಂಬಾಕು ಉತ್ಪನ್ನ, ಬೀಡಿ, ಇಂಗಾಲಯುಕ್ತ, ಕೆಫೀನ್ ಯುಕ್ತ ಆಲ್ಕೋಹಾಲ್ ರಹಿತ ಪಾನೀಯಗಳು, 350 ಸಿಸಿ ಮೀರಿದ ಮೋಟಾರು ಸೈಕಲ್, 1200 ಸಿಸಿ ಮೀರಿದ ಪೆಟ್ರೋಲ್, 1500 ಸಿಸಿ ಮೀರಿದ ಡೀಸೆಲ್ ಕಾರು, ವೈಯಕ್ತಿಕ ಬಳಕೆಯ ವಿಮಾನ, ವಿಹಾರ ನೌಕೆ, ರಿವಾಲ್ವರ್, ಪಿಸ್ತೂಲ್, ಐಪಿಎಲ್, ಜೂಜು, ಕುದುರೆ ರೇಸ್.

Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ಬೆಂಗಳೂರು ಸೇರಿದಂತೆ ಈ ಎಲ್ಲಾ ಜಿಲ್ಲೆಗಳಿಗೆ ಇಂದೂ ಮಳೆ ಮುನ್ಸೂಚನೆ