Publish Date: Wed, 30 Dec 2020 (06:58 IST)
Updated Date: Wed, 30 Dec 2020 (07:00 IST)
ನವದೆಹಲಿ : ಹಣ ನೀಡಲು ನಿರಾಕರಿಸಿದ್ದಕ್ಕೆ 19 ವರ್ಷದ ಮೊಮ್ಮಗ ಅಜ್ಜಿಯ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ ಘಟನೆ ಪೂರ್ವ ದೆಹಲಿಯ ಶಹದಾರಾ ಪ್ರದೇಶದಲ್ಲಿ ನಡೆದಿದೆ.
ಅಜ್ಜಿಗೆ ಇಬ್ಬರು ಗಂಡುಮಕ್ಕಳು. ಅದರಲ್ಲಿ ಹಿರಿಯ ಮಗನ ಮಗ ರಾತ್ರಿಯ ವೇಳೆ ಅಜ್ಜಿಯ ಬಳಿ ಬಂದು ಹಣ ನೀಡುವಂತೆ ಕೇಳಿದ್ದಾನೆ. ಆದರೆ ಅಜ್ಜಿ ಇದಕ್ಕೆ ನಿರಾಕರಿಸಿದಾಗ ಆಕೆಯ ತಲೆಗೆ ಸುತ್ತಿಗೆಯಿಂದ ಹೊಡೆದು 18 ಸಾವಿರ ರೂ. ದೋಚಿದ್ದಾನೆ. ಬೆಳಿಗ್ಗೆ ತಾಯಿಯನ್ನು ನೋಡಲು ಮನೆಗೆ ಬಂದ ಮಕ್ಕಳು ಆಕೆ ರಕ್ತದ ಮಡಲಿನಲ್ಲಿ ಬಿದ್ದು ಸತ್ತಿರುವುದು ಕಂಡುಬಂದಿದೆ.
ಈ ಬಗ್ಗೆ ಮಕ್ಕಳು ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಸತ್ಯಾಂಶ ತಿಳಿದುಬಂದಿದ್ದು, ಆರೋಪಿ ಮೊಮ್ಮಗನನ್ನು ಬಂಧಿಸಿದ್ದಾರೆ ಎನ್ನಲಾಗಿದೆ.