ನವದೆಹಲಿ : 2022 ರಿಂದ ಗೂಗಲ್ ಸರ್ಚ್ ಎಂಜಿನ್ ಯಾವುದೇ ಚುನಾವಣೆಯಲ್ಲೂ ಎಡಪಂಥೀಯ ಪಕ್ಷಗಳೇ ಗೆಲುವುದು ಸಾಧಿಸುವುದಾಗಿ ಹೇಳುವ ಸುದ್ದಿಗಳನ್ನು ಪ್ರಕಟಿಸುತ್ತಿದೆ ಎಂದು ಸಾಕ್ಷಿ ಸಹಿತ ಟೀಕಿಸಿದ್ದಾರೆ. ಸರ್ಚ್ ಎಂಜಿನ್ ದೈತ್ಯ ಗೂಗಲ್ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಹಸ್ತಕ್ಷೇಪ ನಡೆಸಿದ ಆರೋಪ ಕೇಳಿಬಂದಿದೆ. ಈ ಕುರಿತು ಎಕ್ಸ್ ನಲ್ಲಿ ಹಲವು ಮಂದಿ ಆರೋಪಿಸಿದ್ದು,ಈ ಕುರಿತು ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ ಕೂಡ ಪ್ರತಿಕ್ರಿಯಿಸಿ, ಈ ಬಗ್ಗೆ ಕಾಳಜಿ ವಹಿಸುವುದಾಗಿ ಭರವಸೆ ನೀಡಿದ್ದಾರೆ. ಭಾರತದ ಸಂಸದ, ಸಚಿವ ರಾಜೀವ್ ಚಂದ್ರಶೇಖರ್ ಕೂಡ ಈ ಚರ್ಚೆಯಲ್ಲಿ ಪಾಲ್ಗೊಂಡಿದ್ದು, ಭಾರತದ ಗೂಗಲ್ ಏಐ ಮತ್ತು ಗೂಗಲ್ ಸುದ್ದಿಗಳ ಬಗ್ಗೆ ಕಾಳಜಿ ವಹಿಸುವುದಾಗಿ ಹೇಳಿದ್ದಾರೆ.
ಟ್ವಿಟರ್ ಬಳಕೆದಾರರು ನೀಡಿರುವ ಮಾಹಿತಿಯಲ್ಲಿ ಕಳೆದ ವರ್ಷ ಎಲ್ಲೆಡೆ ನಡೆದ ಚುನಾವಣೆಗಳ ಸುದ್ದಿಯನ್ನು ಬಿತ್ತರಿಸುವಾಗ ಗೂಗಲ್ ನ್ಯೂಸ್ ಶೇ 63 ರಷ್ಟು ಎಡಪಂಥೀಯ ಪಕ್ಷಗಳ ಪರವಾಗಿ, ಶೇ 16 ರಷ್ಟು ನಡುಪಂಥೀಯ ಸುದ್ದಿಗಳ ಪರವಾಗಿ, ಶೇ 6 ರಷ್ಟು ಬಲ ಪಂಥೀಯ ಪಕ್ಷಗಳ ಪರವಾಗಿ ಸುದ್ದಿ ಪ್ರಕಟಿಸಿದೆ ಎಂದು ಅಂಕಅಂಶ ಸಹಿತ ವಿವರಿಸಲಾಗಿದೆ.