Publish Date: Thu, 11 Oct 2018 (11:16 IST)
Updated Date: Thu, 11 Oct 2018 (11:17 IST)
ನವದೆಹಲಿ: ಸಾಫ್ಟ್ ವೇರ್ ದೈತ್ಯ ಗೂಗಲ್ ಸಂಸ್ಥೆಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ 24 ವರ್ಷದ ಯುವಕನೊಬ್ಬ ಗರ್ಲ್ ಫ್ರೆಂಡ್ ಗಾಗಿ ವೆಚ್ಚ ಮಾಡಲು ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡಿದ್ದಾನೆ.
ಹರ್ಯಾಣದ ಅಂಬಾಲ ಜಿಲ್ಲೆಯ ಗರ್ವಿತ್ ಸಾಹ್ನಿ ಎಂಬಾತ ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಸೆಪ್ಟೆಂಬರ್ 11 ರಂದು ತಾಜ್ ಪ್ಯಾಲೇಸ್ ಹೋಟೆಲ್ ನಲ್ಲಿ ನಡೆದ ಕಾನ್ ಫರೆನ್ಸ್ ನಲ್ಲಿ ಈತ ಮಹಿಳೆಯೊಬ್ಬರ ಬ್ಯಾಗ್ ನಿಂದ 10 ಸಾವಿರ ರೂ. ಕಳ್ಳತನ ಮಾಡಿದ್ದ.
ಈ ಬಗ್ಗೆ ಮಹಿಳೆ ದೂರು ನೀಡಿದ್ದಳು. ಈ ಸಂಬಂಧ ಸಿಸಿಟಿವಿ ಫೂಟೇಜ್ ವೀಕ್ಷಿಸಿ ತನಿಖೆ ನಡೆಸಿದ ಪೊಲೀಸರಿಗೆ ಈತನ ಕೃತ್ಯ ಬಯಲಾಗಿದೆ. ವಿಚಾರಣೆ ವೇಳೆ ಪ್ರಿಯತಮೆಯ ಖರ್ಚು ವೆಚ್ಚಕ್ಕೆ ಹಣ ಹೊಂದಿಸಲು ಕಳ್ಳತನ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾನೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.