Select Your Language

Notifications

webdunia
webdunia
webdunia
webdunia

9 ವರ್ಷದ ಹಿಂದೆ ಕಳೆದುಹೋಗಿದ್ದ ಬಾಲಕಿ ಈಗ ಪತ್ತೆ: ಆರೋಪಿಗಳ ಬಂಧನ

9 ವರ್ಷದ ಹಿಂದೆ ಕಳೆದುಹೋಗಿದ್ದ ಬಾಲಕಿ ಈಗ ಪತ್ತೆ: ಆರೋಪಿಗಳ ಬಂಧನ
ಮುಂಬೈ , ಸೋಮವಾರ, 8 ಆಗಸ್ಟ್ 2022 (09:00 IST)
ಮುಂಬೈ: 9 ವರ್ಷದ ಹಿಂದೆ ಶಾಲೆಗೆ ಹೋಗಿದ್ದ ಬಾಲಕಿಯನ್ನು ಪತ್ತೆ ಮಾಡಿರುವ ಪೊಲೀಸರು ಮರಳಿ ಪೋಷಕರ ಮಡಿಲಿಗೊಪ್ಪಿಸಿದ್ದಾರೆ.

ಶಾಲೆಗೆ ಹೋಗಿದ್ದ ಬಾಲಕಿಯನ್ನು ಆರೋಪಿಯೊಬ್ಬ ಅಪಹರಿಸಿದ್ದ. ಆತನಿಗೆ ಮಕ್ಕಳಿರಲಿಲ್ಲ. ಈ ಕಾರಣಕ್ಕೆ ಬಾಲಕಿಯನ್ನು ಅಪಹರಿಸಿದ್ದ. ಈ ಬಗ್ಗೆ ಅಂದೇ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.

ಇತ್ತೀಚೆಗೆ ಬಾಲಕಿ ತನ್ನನ್ನು ಅಪಹರಿಸಿದ ದಂಪತಿ ತನಗೆ ಮನೆಗೆಲಸ ಮಾಡಿಸಿ ಚಿತ್ರಹಿಂಸೆ ನೀಡುತ್ತಿರುವ ಬಗ್ಗೆ ಮನೆಗೆಲಸ ಮಾಡುತ್ತಿದ್ದ ಮಹಿಳೆಯೊಬ್ಬರ ಬಳಿ ಹೇಳಿಕೊಂಡಿದ್ದಳು. ಅದರಂತೆ ಆಕೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ಬಳಿಕ ಬಾಲಕಿಯನ್ನು ರಕ್ಷಿಸಲಾಗಿದೆ. ಈ ವೇಳೆ 9 ವರ್ಷದ ಹಿಂದೆ ತಾನು ಅಪಹರಣಕ್ಕೊಳಗಾದ ಕತೆಯನ್ನು ಬಾಲಕಿ ಬಯಲು ಮಾಡಿದ್ದಾಳೆ. ಬಳಿಕ ಪೋಷಕರಿಗೆ ಆಕೆಯನ್ನು ನೀಡಲಾಗಿದ್ದು, ಆರೋಪಿಗಳನ್ನು ಬಂದಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಇನ್ನೂ 2 ದಿನ ಭಾರೀ ಮಳೆ