Publish Date: Mon, 23 Nov 2020 (08:01 IST)
Updated Date: Mon, 23 Nov 2020 (08:07 IST)
ಪುದುಚೇರಿ : 14 ವರ್ಷದ ಹುಡುಗಿಯೊಬ್ಬಳು ತನ್ನ ಮೇಲೆ ಮಾನಭಂಗ ಎಸಗಲು ಮಂದಾದ 36 ವರ್ಷದ ಕಾಮುಕನ ವಿರುದ್ಧ ಹೋರಾಡಿದ ಘಟನೆ ಪುದುಚೇರಿಯಲ್ಲಿ ನಡೆದಿದೆ.
ಹುಡುಗಿಯನ್ನು ಮನೆಯ ಹಿತ್ತಲಿನಿಂದ ಅಪಹರಿಸಿ ತೋಟಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಅವಳು ದುಪ್ಪಟಾದಿಂದ ಮರಕ್ಕೆ ಕಟ್ಟಿ ಹಾಕಿ ಬಾಯಿಗೆ ಬಟ್ಟೆ ತುರುಕಿ ಮಾನಭಂಗಕ್ಕೆ ಯತ್ನಿಸಿದ್ದಾನೆ. ಆಗ ಹುಡುಗಿ ಆತನ ವಿರುದ್ಧ ಹೋರಾಡಿದ್ದಾಳೆ, ಬಳಿಕ ತೋಟದ ಕಡೆಗೆ ಯಾರೋ ಬರುತ್ತಿರುವುದನ್ನು ಗಮನಿಸಿ ಆತ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಮರುದಿನ ಹುಡುಗಿಯನ್ನು ದಾರಿಹೋಕರೊಬ್ಬರು ರಕ್ಷಿಸಿದ್ದಾರೆ. ಮನೆಗೆ ಬಂದ ಹುಡುಗಿ ಮನೆಯವರಿಗೆ ವಿಚಾರ ತಿಳಿಸಿದ್ದಾಳೆ.
ಆದರೆ ಮನೆಯವರು ಪೊಲೀಸರಿಗೆ ದೂರು ಹಿಂಜರಿದಿದ್ದಾರೆ. ಆದರೆ ಅನಾಮಧೇಯ ವ್ಯಕ್ತಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.