Publish Date: Sun, 22 Nov 2020 (10:34 IST)
Updated Date: Sun, 22 Nov 2020 (10:36 IST)
ಬೆಂಗಳೂರು : ಕೆಹಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಸಂಪತ್ ರಾಜ್ ಅವರಿಗೆ ಜೈಲಿನಲ್ಲಿ ರಾಜ ವೈಭೋಗ ನೀಡಲಾಗುತ್ತಿದೆ ಎಂಬುದಾಗಿ ತಿಳಿದುಬಂದಿದೆ.
ಜೈಲಿನ ಸಿಬ್ಬಂದಿಯಿಂದಲೇ ಸಂಪತ್ ಗೆ ಹಾಸಿಗೆ, ದಿಂಬು ನೀಡಲಾಗುತ್ತಿದೆ. ಸಂಪತ್ ಗೆ ಫೈವ್ ಸ್ಟಾರ್ ಹೋಟೆಲ್ ಆತಿಥ್ಯ ನೀಡಲಾಗುತ್ತಿದೆ. ಅಲ್ಲದೇ 14 ದಿನ ಕ್ವಾರಂಟೈನ್ ಇಲ್ಲದೆ ಜೈಲಿನ ಕೊಠಡಿಗೆ ಸಂಪತ್ ರಾಜ್ ರನ್ನು ಶಿಪ್ಟ್ ಮಾಡಲಾಗಿದೆ ಎನ್ನಲಾಗಿದೆ.