Publish Date: Sun, 03 Jan 2021 (08:37 IST)
Updated Date: Sun, 03 Jan 2021 (08:38 IST)
ಮೀರತ್ : ವಿವಾಹಿತ ಮಹಿಳೆಯೊಬ್ಬಳನ್ನು ಆಕೆಯ ಗೆಳೆಯ ಕೊಲೆ ಮಾಡಿ ಪೊಲೀಸರಿಗೆ ಶರಣಾದ ಘಟನೆ ಮೀತರ್ ನ ಬ್ರಹ್ಮಪುರಿ ಪೊಲೀಸ್ ಠಾಣಾ ವ್ಯಾಪ್ತಿಯ ಹರಿನಗರ ಮೊಹಲ್ಲಾದಲ್ಲಿ ನಡೆದಿದೆ.
ಮಹಿಳೆಗೆ ಮದುವೆಯಾಗಿ 5 ಮಕ್ಕಳಿದ್ದರೂ ಕೂಡ ಆರೋಪಿ ಗೆಳೆಯನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಆದರೆ ಆರೋಪಿ ಆಕೆ ಮತ್ತೊಬ್ಬ ಪುರುಷನ ಜೊತೆ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದಿಂದ ಆಕೆಯ ಶಿರಚ್ಚೇದ ಮಾಡಿ ಪೊಲೀಸ್ ಠಾಣೆಗೆ ಬಂದು ಪೊಲೀಸರಿಗೆ ಶರಣಾಗಿದ್ದಾನೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.