Select Your Language

Notifications

webdunia
webdunia
webdunia
webdunia

ಐಫೋನ್ -15 ಉತ್ಪಾದನೆ ಆರಂಭಿಸಿದ ಫಾಕ್ಸ್‌ಕಾನ್‌

ಐಫೋನ್ -15 ಉತ್ಪಾದನೆ ಆರಂಭಿಸಿದ ಫಾಕ್ಸ್‌ಕಾನ್‌
ಚೆನ್ನೈ , ಗುರುವಾರ, 17 ಆಗಸ್ಟ್ 2023 (11:08 IST)
ಚೆನ್ನೈ : ಆಪಲ್ ಇಂಕ್ ತಮಿಳುನಾಡಿನಲ್ಲಿ ಐಫೋನ್-15ರ ಉತ್ಪಾದನೆ ಪ್ರಾರಂಭಿಸಿದೆ. ಫಾಕ್ಸ್ಕಾನ್ ಟೆಕ್ನಾಲಜಿ ಗ್ರೂಪ್ ಘಟಕವು ಶ್ರೀಪೆರಂಬದೂರಿನಲ್ಲಿರುವ ಉತ್ಪಾದನೆಗೆ ಬೇಕಾದ ಎಲ್ಲ ಸಿದ್ಧತೆ ಆರಂಭಿಸಿದೆ.

ಈ ಮೂಲಕ ಭಾರತ ಮತ್ತು ಚೀನಾದಲ್ಲಿನ ಮುಖ್ಯ ಉತ್ಪಾದನಾ ನೆಲೆಯ ಅಂತರವನ್ನ ಮತ್ತಷ್ಟು ಕಡಿಮೆಗೊಳಿಸುವ ಪ್ರಯತ್ನಕ್ಕೆ ಮುಂದಾಗಿದೆ. ಹೊಸ ಐಫೋನ್ ಬಿಡುಗಡೆ ದಿನಾಂಕವನ್ನ ಸೆಪ್ಟೆಂಬರ್ 12 ರಂದು ಘೋಷಿಸುವ ಸಾಧ್ಯತೆಯಿದೆ. 

ಚೀನಾದ (ಅhiಟಿಚಿ) ಘಟಕಗಳು ಹೊಸ ಸಾಧನಗಳ ಪೂರೈಕೆ ಆರಂಭಿಸಿದ್ದು, ಇದಾದ ಒಂದು ವಾರಗಳ ಬಳಿಕ ಈ ಬೆಳವಣಿಗೆ ಕಂಡುಬಂದಿದೆ. ಆಪಲ್ ಕಂಪನಿಯು ಭಾರತದಲ್ಲಿ ತಯಾರಾಗುವ ಹೊಸ ಐಫೋನ್ಗಳ ವಾಲ್ಯೂಮ್ ಅನ್ನು ತ್ವರಿತವಾಗಿ ಹೆಚ್ಚಿಸಲು ಪ್ರಯತ್ನಿಸುತ್ತಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಐಫೋನ್ 14 ಉತ್ಪಾದನೆಗೂ ಮುನ್ನ ಆಪಲ್ ಭಾರತದಲ್ಲಿ ತನ್ನ ಐಫೋನ್ಗಳನ್ನ ಒಂದು ಭಾಗವನ್ನು ಜೋಡಣೆ ಮಾತ್ರ ಮಾಡುತ್ತಿತ್ತು. ಚೀನಾಕ್ಕೆ ಹೋಲಿಸಿದರೆ ಉತ್ಪಾದನೆ 6 ರಿಂದ 9 ತಿಂಗಳವರೆಗೆ ಹಿಂದುಳಿದಿತ್ತು. ಕಳೆದ ಒಂದು ವರ್ಷದಿಂದ ಈ ವಿಳಂಬವನ್ನ ಕಡಿಮೆಗೊಳಿಸಲಾಗಿದೆ. ಮಾರ್ಚ್ ಅಂತ್ಯದಲ್ಲಿ ಆಪಲ್ 7% ಐಫೋನ್ ಉತ್ಪನ್ನಗಳನ್ನ ಭಾರತದಲ್ಲೇ ಉತ್ಪಾದಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭೀಕರ ಅಪಘಾತ : ಸ್ಥಳದಲ್ಲೇ ಐವರ ಸಾವು!