Select Your Language

Notifications

webdunia
webdunia
webdunia
webdunia

ಭೀಕರ ಅಪಘಾತ : ಸ್ಥಳದಲ್ಲೇ ಐವರ ಸಾವು!

ಭೀಕರ ಅಪಘಾತ : ಸ್ಥಳದಲ್ಲೇ ಐವರ ಸಾವು!
ಹೈದರಾಬಾದ್ , ಗುರುವಾರ, 17 ಆಗಸ್ಟ್ 2023 (10:38 IST)
ಹೈದರಾಬಾದ್ : ಲಾರಿ ಹಾಗೂ ಆಟೋ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿದ ಘಟನೆ ಬುಧವಾರ ಬೆಳಗ್ಗೆ ತೆಲಂಗಾಣದ ವಾರಂಗಲ್ನ ಯೆಲ್ಲಂಡ ಎಂಬಲ್ಲಿ ನಡೆದಿದೆ. ಅಪಘಾತದಲ್ಲಿ ಐವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತಕ್ಕೀಡಾದ ಆಟೋದಲ್ಲಿದ್ದವರು ಜೇನು ಸಂಗ್ರಹಿಸಲು ಕಾಡಿಗೆ ತೆರಳುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ಲಾರಿ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಸ್ಥಳದಲ್ಲೇ ಐವರು ಸಾವನ್ನಪ್ಪಿದ್ದಾರೆ. ಗಾಯಗೊಂಡ ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಳಗ್ಗೆ 8.30ರ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆಯಲ್ಲಿ ಆಟೋ ರಿಕ್ಷಾ ಚಾಲಕ ಸೇರಿದಂತೆ ಮೃತರ ಶವಗಳು ಛಿದ್ರಗೊಂಡಿದ್ದು, ಯಾರ ಗುರುತು ಪತ್ತಿಯಾಗಿಲ್ಲ ಎಂದು ವರ್ಧನ್ನಪೇಟೆ ಪೊಲೀಸರು ತಿಳಿಸಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಬಿಎಂಟಿಸಿ ಬಸ್ ಹರಿದು 4ರ ಬಾಲಕಿ ಸಾವು