Select Your Language

Notifications

webdunia
webdunia
webdunia
webdunia

ಹೆಚ್ಚಗ್ತಿರೋ ಅಪಘಾತಕ್ಕೆ ಅಲೋಕ್ ಕುಮಾರ್ ‌ಬೇಸರ

ಹೆಚ್ಚಗ್ತಿರೋ ಅಪಘಾತಕ್ಕೆ ಅಲೋಕ್ ಕುಮಾರ್ ‌ಬೇಸರ
bangalore , ಸೋಮವಾರ, 14 ಆಗಸ್ಟ್ 2023 (14:23 IST)
ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗ್ತಿರೋ ಆ್ಯಕ್ಸಿಡೆಂಟ್ ಕೇಸ್ ಗಳಲ್ಲಿ ಬೈಕ್ ಸವರಾರೇ  ಹೆಚ್ಚು ಪ್ರಾಣಕಳೆದುಕೊಂಡಿದ್ದಾರೆ.ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚಾಗ್ತಿರೋ ಆ್ಯಕ್ಸಿಡೆಂಟ್ ಕೇಸ್ ಗಳ ಬಗ್ಗೆ ಶಾಕಿಂಗ್ ವಿಚಾರ ಶೇರ್ ಮಾಡಿರೋ ಎಡಿಜಿಪಿ ಅಲೋಕ್ ಕುಮಾರ್ ಶನಿವಾರ ಒಂದೇ ದಿನ ರಾಜ್ಯದಲ್ಲಿ 37 ಜನ ಆ್ಯಕ್ಸಿಡೆಂಟ್ ನಿಂದ ಸಾವು ಸಂಭವಿಸೋರೋ‌ ಮಾಹಿತಿ ನೀಡಿದ್ದಾರೆ.
 
ಕಳೆದ ಶನಿವಾರ ಒಂದೇ ದಿನ ಅಪಘಾತಗಳಿಂದ ರಾಜ್ಯದಲ್ಲಿ 37 ಜನ ಸಾವನ್ನಪ್ಪಿದ್ದು,ಚಿತ್ರದುರ್ಗದ ಕಾರು-ಲಾರಿ ಅಪಘಾತದಲ್ಲೇ ಐವರು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆ ಎಡಿಜಿಪಿ ಅಲೋಕ್ ಕುಮಾರ್ ‘ಕರಾಳ ಶನಿವಾರ‘ ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.ಟ್ವೀಟ್ ಮಾಡಿ ಸಾರ್ವಜನಿಕರಿಗೆ ಮನವಿ ಮಾಡಿರೋ ರಾಜ್ಯ ರಸ್ತೆ ಮತ್ತು ಸುರಕ್ಷತ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅನುಭವ ಇಲ್ಲದವರು ನೈಟ್ ಟ್ರಾವೆಲ್ ಅವೈಡ್ ಮಾಡಿ,ಕುಡಿದು ವಾಹನ ಓಡಿಸಬೇಡಿ,ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ  ಹೆಲ್ಮೆಟ್ ಧರಿಸಿ ಎಂದು ಸಲಹೆ ನೀಡಿದ್ದಾರೆ.ರಸ್ತೆ ನಿಯಮಗಳನ್ನು ಪಾಲನೆ ಮಾಡಿ, ಆತುರದಿಂದ‌ ಡ್ರೈವಿಂಗ್ ಮಾಡಬಾರದು, ಎಂದು ಕೆಲವು ಸಲಹೆಗಳನ್ನ, ಹಾಗೂ ಮನವಿಯನ್ನ ಮಾಡಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೇಘಸ್ಫೋಟಕ್ಕೆ 7 ಬಲಿ! ಕೊಚ್ಚಿ ಹೋದ ಮನೆಗಳು