Select Your Language

Notifications

webdunia
webdunia
webdunia
webdunia

ಡಾಲರ್ ಮೌಲ್ಯದ ಕಂಪನಿಯಾಗಿ ಹೊರಹೊಮ್ಮಿದ ಆಪಲ್

ಡಾಲರ್ ಮೌಲ್ಯದ ಕಂಪನಿಯಾಗಿ ಹೊರಹೊಮ್ಮಿದ ಆಪಲ್
ಕ್ಯಾಲಿಫೋರ್ನಿಯಾ , ಶನಿವಾರ, 1 ಜುಲೈ 2023 (10:20 IST)
ಕ್ಯಾಲಿಫೋರ್ನಿಯಾ : ಐಫೋನ್ ತಯಾರಕಾ, ಜಾಗತಿಕ ಐಟಿ ಕಂಪನಿ ಆಪಲ್ ಎರಡನೇ ಬಾರಿ 3 ಟ್ರಿಲಿಯನ್ (3 ಲಕ್ಷ ಕೋಟಿ) ಡಾಲರ್ ಮಾರುಕಟ್ಟೆ ಮೌಲ್ಯ ಹೊಂದಿದ ಕಂಪನಿಯಾಗಿ ಹೊರಹೊಮ್ಮಿದೆ.
 
ಆಪಲ್ ಕಂಪನಿಯ ಒಂದು ಷೇರು ಮೌಲ್ಯ 1.6% ಏರಿಕೆಯಾಗಿ ಕೊನೆಗೆ 192.6 ಡಾಲರ್ನಲ್ಲಿ(15,804 ರೂ.) ವ್ಯವಹಾರ ಮುಗಿಸಿತು. ಈ ವರ್ಷ ಕಂಪನಿಯ ಷೇರು ಮೌಲ್ಯ 46% ಏರಿಕೆಯಾಗಿದೆ. ಈ ಹಿಂದೆ ಕಳೆದ ವರ್ಷದ ಜನವರಿಯಲ್ಲಿ 3 ರಂದು 3 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ಹೊಂದಿದ ಅಮೆರಿಕದ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

ಮೇ ತಿಂಗಳಿನಲ್ಲಿ ಬಿಡುಗಡೆಯಾದ ಎರಡನೇ ತ್ರೈಮಾಸಿಕದಲ್ಲಿ ಆಪಲ್ ಕಂಪನಿ 94.8 ಶತಕೋಟಿ ಡಾಲರ್ ಆದಾಯ ಗಳಿಸಿತ್ತು. ಈ ಆದಾಯದ ಪೈಕಿ ಐಫೋನ್ ಮಾರಾಟದಿಂದಲೇ 54.1% ಆದಾಯ ಬಂದಿತ್ತು. ಅಮೆರಿಕದಲ್ಲಿ ಆರ್ಥಿಕ ಅನಿಶ್ಚಿತತೆ ಇದ್ದರೂ ಆಪಲ್ ಕಂಪನಿ ಹೂಡಿಕೆದಾರರ ನಂಬಿಕೆಯನ್ನು ಉಳಿಸಿಕೊಂಡಿದೆ.  

 

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ ಅನ್ನಭಾಗ್ಯ, ಗೃಹಜ್ಯೋತಿ ಜಾರಿ