Select Your Language

Notifications

webdunia
webdunia
webdunia
webdunia

ರಾಮೇಶ್ವರಂ ಕೆಫೆಯಲ್ಲಿ ದೋಸೆ ಸವಿದ ಉತ್ತರಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್

Former Chief Minister of Uttar Pradesh, Akhilesh Yadav, Rameshwaram Cafe

Sampriya

ಬೆಂಗಳೂರು , ಮಂಗಳವಾರ, 18 ನವೆಂಬರ್ 2025 (14:55 IST)
Photo Credit X
ಬೆಂಗಳೂರು: ಕರ್ನಾಟಕದ ವಿಶೇಷ ನಂಟು ಹೊಂದಿರುವ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಈಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದು, ರಾಮೇಶ್ವರಂ ಕೆಫೆಯಲ್ಲಿ ದೋಸೆ ಸವಿದಿದ್ದಾರೆ. 

ಈ ಕುರಿತ ಚಿತ್ರವನ್ನು ಅಖಿಲೇಶ್‌ ಯಾದವ್‌ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಕರ್ನಾಟಕದ ನೆನಪು, ಹಳೆಯ ಬಂಧ, ಧನ್ಯವಾದಗಳು ಬೆಂಗಳೂರು! ಎಂದು ಒಕ್ಕಣೆಯಲ್ಲಿ ಬರೆದುಕೊಂಡಿದ್ದಾರೆ.

ಅಖಿಲೇಶ್‌ ಅವರು ಗೃಹ ಸಚಿವ ಜಿ. ಪರಮೇಶ್ವರ ಅವರ ಸದಾಶಿವನಗರದಲ್ಲಿರುವ ಮನೆಗೆ ಭೇಟಿ ನೀಡಿದ್ದರು. ಸಂಬಂಧಿಯೊಬ್ಬರ ಮನೆಗೆ ಬಂದಿದ್ದ ಅಖಿಲೇಶ್ ಪರಮೇಶ್ವರ ಅವರ ಭೇಟಿ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿ, ಇದು ಸೌಜನ್ಯ ಮತ್ತು ಶಿಷ್ಟಾಚಾರದ ಭೇಟಿ ಅಷ್ಟೇ ಎಂದಿದ್ದರು.

ನ.15ರಂದು ಪರಮೇಶ್ವರ ಅವರು ಅಖಿಲೇಶ್‌ ಜೊತೆಗಿನ ಫೋಟೊ ಹಂಚಿಕೊಂಡಿದ್ದಾರೆ. ಅಖಿಲೇಶ್ ಯಾದವ್ ಅವರು ಬೆಂಗಳೂರಿನ ಸದಾಶಿವನಗರದಲ್ಲಿರುವ ನನ್ನ ನಿವಾಸಕ್ಕೆ  ಸೌಜನ್ಯಯುತ ಭೇಟಿ ನೀಡಿದರು. ಈ ವೇಳೆ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡು, ವಿವಿಧ ವಿಚಾರಗಳ ಕುರಿತು ಚರ್ಚಿಸಿದೆನು ಎಂದು ಹೇಳಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಹೈಕಮಾಂಡ್ ಮುಂದೆ ಡಿಕೆ ಶಿವಕುಮಾರ್ ಇಟ್ಟಿರುವ ನಾಲ್ಕು ಡಿಮ್ಯಾಂಡ್ ಗಳೇನು