Select Your Language

Notifications

webdunia
webdunia
webdunia
webdunia

ಡಿಜಿಟಲ್ ಕುಂಭಮೇಳ ಎಂದಿದ್ದ ಸರ್ಕಾರದಿಂದ ಸತ್ತವರ ಸಂಖ್ಯೆ ಮಾತ್ರ ಮರೆ: ಅಖಿಲೇಶ್ ಯಾದವ್‌

Mahakumbh Mela 2025, PrayagRaj Stampede Case, Samajwadi Party leader Akhilesh Yadav

Sampriya

ನವದೆಹಲಿ , ಮಂಗಳವಾರ, 4 ಫೆಬ್ರವರಿ 2025 (15:36 IST)
Photo Courtesy X
ನವದೆಹಲಿ: ಪ್ರಯಾಗ್‌ರಾಜ್‌ನಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆಯನ್ನು ಸರ್ಕಾರ ಮರೆಮಾಡುತ್ತಿದೆ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಗಂಭೀರ ಆರೋಪ ಮಾಡಿದರು.

ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಯಾದವ್, ಸರ್ಕಾರ ಡಿಜಿಟಲ್ ಕುಂಭವನ್ನು ಆಯೋಜಿಸುವುದಾಗಿ ಹೇಳಿಕೊಂಡಿದೆ, ಆದರೆ ಸತ್ತವರ ಸಂಖ್ಯೆಗಳನ್ನು ಮರೆಮಾಡುತ್ತಿದೆ ಎಂದು ಹೇಳಿದರು.

ಕುಂಭ ಮೇಳದ ವ್ಯವಸ್ಥೆಗಳ ಬಗ್ಗೆ ಚರ್ಚಿಸಲು ಸರ್ಕಾರ ಸರ್ವಪಕ್ಷ ಸಭೆಯನ್ನು ಕರೆಯಬೇಕು ಮತ್ತು ವಿಪತ್ತು ನಿರ್ವಹಣೆ ಮತ್ತು ಲಾಸ್ಟ್ ಅಂಡ್ ಫೌಂಡ್ ಸೆಂಟರ್ ಅನ್ನು ಸೇನೆಗೆ ಹಸ್ತಾಂತರಿಸಬೇಕು ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಒತ್ತಾಯಿಸಿದರು.

ಸರ್ಕಾರವು ನಿರಂತರವಾಗಿ ಬಜೆಟ್ ಸಂಖ್ಯೆಯನ್ನು ಹೊರಹಾಕುತ್ತಿದೆ, ದಯವಿಟ್ಟು ಕುಂಭದಲ್ಲಿ ಸತ್ತವರ ಸಂಖ್ಯೆಯನ್ನು ಸಹ ನೀಡಿ ಎಂದು ಯಾದವ್ ಹೇಳಿದರು.

ಕುಂಭಮೇಳದ ವ್ಯವಸ್ಥೆಯಲ್ಲಿನ ದುರ್ ನಿರ್ವಹಣೆಯನ್ನು ಮುಚ್ಚಿಹಾಕಲು ಯತ್ನಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಎಸ್ಪಿ ನಾಯಕ ಒತ್ತಾಯಿಸಿದರು.

ಮಹಾಕುಂಭ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ, ಗಾಯಾಳುಗಳ ಚಿಕಿತ್ಸೆ, ಔಷಧಿ, ವೈದ್ಯರು, ಆಹಾರ, ನೀರು, ಸಾರಿಗೆ ಲಭ್ಯತೆಯ ಅಂಕಿಅಂಶಗಳನ್ನು ಸಂಸತ್ತಿನಲ್ಲಿ ಮಂಡಿಸಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

Mahakumbh Mela 2025: ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ಭೂತಾನ್ ರಾಜ