ತಮಿಳುನಾಡು: ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥ ಕುಮಾರಿ ಅನಂತನ್ (93) ಬುಧವಾರ (ಏಪ್ರಿಲ್ 9, 2025) ಮುಂಜಾನೆ ಚೆನ್ನೈನಲ್ಲಿ ವಯೋಸಹಜ ಅನಾರೋಗ್ಯದಿಂದ ನಿಧನರಾದರು. ತಮಿಳು ಜನರು, ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಪ್ರತಿಪಾದಿಸುತ್ತಾ, ರಾಜ್ಯದ ನೆಲ, ಭಾಷೆ, ಸಂಸ್ಕೃತಿ ಪರ ಹೋರಾಟ ನಡೆಸಿದ್ದರು.
ಇನ್ನೂ ಸಂಸತ್ತಿನ ಸಭಾಂಗಣದಲ್ಲಿ ತಮಿಳು ಭಾಷೆ ಬಳಸಬೇಕೆಂದು ಹೋರಾಟ ಮಾಡಿ, ಎಂದೆದಿಗೂ ನೆನಪಿನಲ್ಲಿ ಉಳಿಯುವ ಕೆಲಸವನ್ನು ಮಾಡಿದರು.
ಅನಂತನ್ ಅವರಿಗೆ ಒಬ್ಬ ಮಗ ಮತ್ತು ನಾಲ್ವರು ಹೆಣ್ಣುಮಕ್ಕಳಿದ್ದಾರೆ, ಅವರಲ್ಲಿ ಹಿರಿಯ ಬಿಜೆಪಿ ನಾಯಕಿ ಮತ್ತು ತೆಲಂಗಾಣದ ಮಾಜಿ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಸೇರಿದ್ದಾರೆ.
1977 ರಲ್ಲಿ, ಅವರು ನಾಗರಕೋಯಿಲ್‌ನಿಂದ ಜನತಾ ಅಥವಾ ಕಾಂಗ್ರೆಸ್ (ಸಂಘಟನೆ) ಅಭ್ಯರ್ಥಿಯಾಗಿ ಲೋಕಸಭೆಗೆ ಆಯ್ಕೆಯಾದರು.
ಅನಂತನ್ ಅವರು ನಾಲ್ಕು ಬಾರಿ ತಮಿಳುನಾಡು ವಿಧಾನಸಭೆಯ ಸದಸ್ಯರಾಗಿದ್ದರು ಮತ್ತು ತಮಿಳಿನಲ್ಲಿ ಪ್ರಖ್ಯಾತ ವಾಗ್ಮಿಯಾಗಿದ್ದರು. ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಸಾಲಿಗ್ರಾಮದಲ್ಲಿರುವ ಅವರ ಮಗಳ ಮನೆಯಲ್ಲಿ ಇರಿಸಲಾಗುವುದು.
ತಮ್ಮ ತಂದೆಯ ನಿಧನದ ಕುರಿತು ಸೌಂದರರಾಜನ್ ಭಾವನಾತ್ಮಕ ಟಿಪ್ಪಣಿ ಬರೆದಿದ್ದಾರೆ. X ನಲ್ಲಿ ಪೋಸ್ಟ್ ಮಾಡಿರುವ ಅವರು, ತಮಿಳುನಾಡು ರಾಜಕೀಯದಲ್ಲಿ ಅನಂತನ್ ಅವರ ಹೆಸರು ಶಾಶ್ವತವಾಗಿ ಉಳಿಯುತ್ತದೆ ಎಂದು ಹೇಳಿದ್ದಾರೆ.