Select Your Language

Notifications

webdunia
webdunia
webdunia
webdunia

ಜಮ್ಮು ಕಾಶ್ಮೀರದ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ಇನ್ನಿಲ್ಲ, ಅವರ ರಾಜಕೀಯ ಹಾದಿ ಇಲ್ಲಿದೆ

ಜಮ್ಮು ಮತ್ತು ಕಾಶ್ಮೀರದ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್

Sampriya

ಜಮ್ಮು ಮತ್ತು ಕಾಶ್ಮೀರ , ಮಂಗಳವಾರ, 5 ಆಗಸ್ಟ್ 2025 (16:05 IST)
Photo Credit X
ಜಮ್ಮು ಮತ್ತು ಕಾಶ್ಮೀರದ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ಅವರು ಮಂಗಳವಾರ (ಆಗಸ್ಟ್ 5, 2025) ನಿಧನರಾದರು. 
ಮೇಘಾಲಯ, ಗೋವಾ, ಒಡಿಶಾ ಮತ್ತು ಬಿಹಾರ ರಾಜ್ಯಗಳ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ. 79 ವರ್ಷದ ಸತ್ಯಪಾಲ್ ಅವರ ನಿಧನವನ್ನು ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ ಹೇಳಿಕೆ ಮೂಲಕ ದೃಢಪಡಿಸಿದೆ. 

ಅವರು ಮಧುಮೇಹ, ಮೂತ್ರಪಿಂಡ ಕಾಯಿಲೆ, ಅಧಿಕ ರಕ್ತದೊತ್ತಡ ಮತ್ತು ಅನಾರೋಗ್ಯದ ಸ್ಥೂಲಕಾಯತೆ ಮತ್ತು ಉಸಿರಾಟದ ಸಮಸ್ಯೆ ಸೇರಿದಂತೆ ಇತರ ದೀರ್ಘಕಾಲದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿದೆ. 

ಅವರು ಮಂಗಳವಾರ (ಆಗಸ್ಟ್ 5, 2025) ಮಧ್ಯಾಹ್ನ 1.12 ಕ್ಕೆ ನಿಧನರಾದರು ಎಂದು ಆಸ್ಪತ್ರೆ ತಿಳಿಸಿದೆ.

ರಾಮ್ ಮನೋಹರ್ ಲೋಹಿಯಾ ಅವರ ಸಮಾಜವಾದಿ ಸಿದ್ಧಾಂತದಿಂದ ಪ್ರೇರಿತರಾಗಿ 1960 ರ ದಶಕದ ಮಧ್ಯಭಾಗದಲ್ಲಿ ಮಲಿಕ್ ರಾಜಕೀಯ ಪ್ರವೇಶಿಸಿದರು. ಅವರು 2004 ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರಿದರು ಮತ್ತು 2012 ರಲ್ಲಿ ಅದರ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕಗೊಂಡರು. ಅವರು 2014 ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ತಂಡದ ಸದಸ್ಯರಾಗಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ಧರ್ಮಸ್ಥಳ ಹಲವಾರು ಶವಗಳನ್ನು ಹೂತಿಟ್ಟ ಪ್ರಕರಣ: ಕಾಡಿನಲ್ಲಿ 7ನೇ ದಿನ ಹೇಗೇ ನಡೆಯುತ್ತಿದೆ ಕಾರ್ಯಚರಣೆ