Select Your Language

Notifications

webdunia
webdunia
webdunia
webdunia

ಬಿಜೆಪಿ ಭೀಷ್ಮ ಅಡ್ವಾಣಿ ದಾಖಲೆ ಮುರಿದ ಚಾಣಾಕ್ಷ ಅಮಿತ್‌ ಶಾ: ಗೃಹ ಸಚಿವರನ್ನು ಕೊಂಡಾಡಿದ ಮೋದಿ

Lal Krishna Advani, BJP stalwart Amit Shah, Prime Minister Narendra Modi

Sampriya

ನವದೆಹಲಿ , ಮಂಗಳವಾರ, 5 ಆಗಸ್ಟ್ 2025 (14:26 IST)
Photo Credit X
ನವದೆಹಲಿ: ಬಿಜೆಪಿ ಭೀಷ್ಮ ಎಲ್‌.ಕೆ. ಅಡ್ವಾಣಿ ಅವರ ಬಹುಕಾಲದ ದಾಖಲೆಯೊಂದನ್ನು ಬಿಜೆಪಿ ಚಾಣಾಕ್ಷ ಅಮಿತ್‌ ಶಾ ಮುರಿದಿದ್ದಾರೆ. ಇದುವರೆಗೆ ಅತಿ ಹೆಚ್ಚು ಕಾಲ ಕೇಂದ್ರ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ ದಾಖಲೆಗೆ ಶಾ ಪಾತ್ರವಾಗಿದ್ದಾರೆ. 

ಅಮಿತ್ ಶಾ ಅವರು ಭಾರತದಲ್ಲಿ ಅತಿ ಹೆಚ್ಚು ಕಾಲ ಕೇಂದ್ರ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ, ಮೇ 2019ರ 30 ರಂದು ಅಧಿಕಾರ ವಹಿಸಿಕೊಂಡಾಗಿನಿಂದ 2,258 ದಿನಗಳನ್ನು ಪೂರೈಸಿದ್ದಾರೆ. 

1998ರ ಮಾರ್ಚ್ 19 ರಿಂದ 2004ರ ಮೇ 22 ರವರೆಗೆ 2,256 ದಿನಗಳ ಕಾಲ ಈ ಹುದ್ದೆಯನ್ನು ಅಲಂಕರಿಸಿದ್ದ ಹಿರಿಯ ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರ ಅಧಿಕಾರಾವಧಿಯನ್ನು ಅಮಿತ್ ಶಾ ಮೀರಿಸಿದ್ದಾರೆ. ಅಮಿತ್ ಶಾ ಅವರು 6 ವರ್ಷ 56 ದಿನಗಳನ್ನು ಈ ಹುದ್ದೆಯಲ್ಲಿ ಪೂರ್ಣಗೊಳಿಸಿದ್ದಾರೆ.  ಶಾ ಅವರು ಗೃಹ ಸಚಿವಾಲಯದ ಜೊತೆಗೆ ಕೇಂದ್ರ ಸಹಕಾರ ಸಚಿವರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಮೋದಿ ಶ್ಲಾಘನೆ: ದೆಹಲಿಯಲ್ಲಿ ಇಂದು ನಡೆದ ಎನ್‌ಡಿಎ ಮೈತ್ರಿಕೂಟ ಸಭೆಯಲ್ಲಿ ಅಮಿತ್ ಶಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು. ಆಪರೇಷನ್ ಸಿಂದೂರ್ ಕುರಿತ ನಿರ್ಣಯವನ್ನು ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಅಂಗೀಕರಿಸಲಾಯಿತು.  

Share this Story:

Follow Webdunia kannada

ಮುಂದಿನ ಸುದ್ದಿ

ಸರಕಾರಿ ಸಾರಿಗೆ ನೌಕರರ ಮುಷ್ಕರಕ್ಕೆ ಪರಿಹಾರ ಕೊಡಿ: ಬಿ.ವೈ.ವಿಜಯೇಂದ್ರ