Publish Date: Fri, 13 May 2022 (09:42 IST)
Updated Date: Fri, 13 May 2022 (09:49 IST)
ಪಣಜಿ: ಉತ್ತರ ಗೋವಾದಲ್ಲಿರುವ ಅರಂಬೋಳ್ ರೆಸಾರ್ಟ್‌ನಲ್ಲಿ ರಷ್ಯಾ ಮೂಲದ 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಯನ್ನು ಕರ್ನಾಟಕದ ಗದಗ ಜಿಲ್ಲೆ ಮಜ್ಜೂರ ತಾಂಡಾದಲ್ಲಿ ಗೋವಾ ಪೊಲೀಸರು ಬಂಧಿಸಿದ್ದಾರೆ.
ಮೇ. 6ರಂದು ಈ ಲೈಂಗಿಕ ದೌರ್ಜನ್ಯ ಪ್ರಕರಣ ನಡೆದಿದ್ದು, ಸಂತ್ರಸ್ತೆಯ ತಾಯಿ ಮೇ. 9ರಂದ ದೂರು ನೀಡಿದ್ದರು. ಮೇ 10ರಂದು ಪೆರ್ನೇಮ್ ಪೊಲೀಸರು ಆರೋಪಿ ರವಿ ಲಮಾಣಿ(28)ಯನ್ನು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಜ್ಜೂರ ತಾಂಡಾದಲ್ಲಿ ಬಂಧಿಸಿದ್ದಾರೆ.
ರೆಸಾರ್ಟ್‌ನಲ್ಲಿ ರೂಮ್ ಅಟೆಂಡರ್ ಆಗಿದ್ದ ಆರೋಪಿ ರವಿ, ಸಂತ್ರಸ್ತೆಯ ತಾಯಿ ಮನೆಗೆ ಅಗತ್ಯ ವಸ್ತುಗಳನ್ನು ತರಲು ಹತ್ತಿರದ ಅರಂಬೋಳ್ ಮಾರುಕಟ್ಟೆಗೆ ಹೋಗಿದ್ದಾಗ ರೂಮ್‌ಗೆ ನುಗ್ಗಿದ್ದ. ಈ ವೇಳೆ, ರೆಸಾರ್ಟ್‌ನ ಈಜುಕೊಳ ಮತ್ತು ಕೊಠಡಿಯ ಒಳಗೆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ. ನಂತರ ಆರೋಪಿ ತವರೂರಿಗೆ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.