Select Your Language

Notifications

webdunia
webdunia
webdunia
webdunia

ಹತ್ಯೆಗೈದು ಶವಕ್ಕೆ ಲೈಂಗಿಕ ಕಿರುಕುಳ ಕೊಟ್ಟ!

ಹತ್ಯೆಗೈದು ಶವಕ್ಕೆ ಲೈಂಗಿಕ ಕಿರುಕುಳ ಕೊಟ್ಟ!
ಹೈದರಾಬಾದ್ , ಗುರುವಾರ, 12 ಮೇ 2022 (14:01 IST)
ಹೈದರಾಬಾದ್ : ಯುವಕನೋರ್ವ ಮಹಿಳೆ ಮೇಲೆ ಅತ್ಯಾಚಾರವೆಸಗಿ ನಂತರ ಹಲ್ಲೆ ನಡೆಸಿ ಹತ್ಯೆಗೈದು, ಆಕೆಯ ಶವಕ್ಕೆ ಲೈಂಗಿಕ ಕಿರುಕುಳ ನೀಡಿರುವ ಭಯಾನಕ ಘಟನೆ ತೆಲಂಗಾಣದಲ್ಲಿ ನಡೆದಿದೆ.
 
ಆರೋಪಿ ಕಟ್ಟಡ ನಿರ್ಮಾಣ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದ. ಈತನ ಮನೆಯ ಸಮೀಪದಲ್ಲಿಯೇ ಸಂತ್ರಸ್ತ ಮಹಿಳೆ ಗೋಡೌನ್ವೊಂದರಲ್ಲಿ ತನ್ನ ಪತಿಯೊಂದಿಗೆ ವಾಸಿಸುತ್ತಿದ್ದಳು. ಆಕೆಯ ಪತಿ ಹತ್ತಿರದ ಕಾಲೇಜೊಂದರಲ್ಲಿ ವಾಚ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದನು.

ಪತಿ ಕೆಲಸಕ್ಕೆ ಹೋದಾಗ ಹಲವಾರು ಗಂಟೆಗಳ ಕಾಲ ಮಹಿಳೆಯೊಬ್ಬಳೆ ಒಬ್ಬಂಟಿಯಾಗಿ ಮನೆಯಲ್ಲಿರುವುದನ್ನು ಗಮನಿಸಿದ ಆರೋಪಿ, ಸೋಮವಾರ ಗೋಡೌನ್ಗೆ ನುಗ್ಗಿ ಆಕೆಗೆ ಜೀವ ಬೆದರಿಕೆಯೊಡ್ಡಿ ಅತ್ಯಾಚಾರವೆಸಗಿದ್ದಾನೆ. ಅಲ್ಲದೇ ಒಂದು ಗಂಟೆಯೊಳಗೆ ಆಕೆಯ ಹತ್ಯೆಗೈದಿದ್ದಾನೆ. 

ಈ ಕುರಿತಂತೆ ಮಾತನಾಡಿದ ಚೌಟುಪ್ಪಲ್ ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ಉದಯ್ ರೆಡ್ಡಿ ಅವರು, ಆರೋಪಿ ಮಹಿಳೆಯ ತಲೆಗೆ ಮೊಂಡಾದ ವಸ್ತುವಿನಿಂದ ಹೊಡೆದು ಕೊಲೆ ಮಾಡಿ ಶವದ ಮೇಲೆ ಪದೇ, ಪದೇ ಅತ್ಯಾಚಾರ ಎಸಗಿದ್ದಾನೆ.

ಜೊತೆಗೆ ಆಕೆಯ ಚಿನ್ನಾಭರಣಗಳನ್ನು ಕದ್ದು ಸ್ಥಳದಿಂದ ಪರಾರಿಯಾಗಿದ್ದಾನೆ.


Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಹಿಂದಿ ಹೇರಿಕೆ ಇಲ್ಲ : ಸಿಎಂ