Publish Date: Tue, 03 Nov 2020 (06:38 IST)
Updated Date: Tue, 03 Nov 2020 (06:40 IST)
ಪಾಟ್ನಾ : ಬಿಹಾರದ ಗೋಪಾಲಗಂಜ್ ನಲ್ಲಿ 30 ವರ್ಷದ ವ್ಯಕ್ತಿಯೊಬ್ಬ ತನ್ನ ಹಿರಿಯ ಸಹೋದರನ 2ನೇ ಪತ್ನಿಯನ್ನು ಕೋಪದಿಂದ ಕೊಲೆ ಮಾಡಿದ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.
ಮೀನಾ ದೇವಿ (34) ಕೊಲೆಯಾದ ಮಹಿಳೆ. ಮನೋಜ್ (30) ಕೊಲೆ ಮಾಡಿದ ಆರೋಪಿ. ಹಿರಿಯ ಸಹೋದರನ ಮೊದಲ ಪತ್ನಿ ನಿಧನರಾಗಿದ್ದಾರೆ. ಅವರಿಗೆ ಚಿಕ್ಕ ಮಕ್ಕಳಿದ್ದ ಕಾರಣ ಅವರು 2ನೇ ಮದುವೆಯಾಗಿದ್ದಾರೆ. ಆದರೆ ಆರೋಪಿ ಮನೋಜ್ ಗೆ ಇನ್ನೂ ಮದುವೆಯಾಗಿಲ್ಲ.
ಮನೆಯವರೆಲ್ಲಾ ಸೇರಿ ತನಗೆ ಮದುವೆ ಮಾಡುವ ಬದಲು ಹಿರಿಯ ಸಹೋದರನಿಗೆ ಮದುವೆ ಮಾಡಿದ್ದಕ್ಕೆ ಕೋಪಗೊಂದ ಆತ ಮೀನಾದೇವಿ ರಾತ್ರಿ ಮಲಗಿದ್ದಾಗ ಹರಿತವಾದ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಈ ಬಗ್ಗೆ ಆರೋಪಿ ಮನೋಜ್ ವಿರುದ್ಧ ದೂರು ದಾಖಲಾದ ಹಿನ್ನಲೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕಂಡ ಪೊಲೀಸರು ಆತನನ್ನು ಹುಡುಕಿ ಬಂಧಿಸಿದ್ದಾರೆ ಎನ್ನಲಾಗಿದೆ.