Publish Date: Thu, 29 Oct 2020 (09:33 IST)
Updated Date: Thu, 29 Oct 2020 (09:36 IST)
ದುಬೈ: ವಿರಾಟ್ ಕೊಹ್ಲಿ ಒಬ್ಬ ಬೆಸ್ಟ್ ಗಂಡ ಎನ್ನುವುದಕ್ಕೆ ಮೊನ್ನೆಯ ಪಂದ್ಯದಲ್ಲಿ ನಡೆದ ಘಟನೆ ಮತ್ತೊಮ್ಮೆ ಸಾಕ್ಷಿಯಾಗಿದೆ. ಮೈದಾನದಲ್ಲಿ ಆರ್ ಸಿಬಿ ತಂಡವನ್ನು ಮುನ್ನಡೆಸುತ್ತಿದ್ದ ವಿರಾಟ್ ಕೊಹ್ಲಿ ಗ್ಯಾಲರಿಯಲ್ಲಿ ಕೂತಿದ್ದ ಪತ್ನಿ ಅನುಷ್ಕಾ ಶರ್ಮಾರತ್ತ ಸನ್ನೆಯಲ್ಲೇ ‘ಊಟ ಮಾಡಿದ್ಯಾ?’ ಎಂದು ಕೇಳಿದ ವಿಡಿಯೋ ಈಗ ವೈರಲ್ ಆಗಿದೆ.
ಅನುಷ್ಕಾ ಗರ್ಭಿಣಿಯಾಗಿದ್ದು, ಕೊಹ್ಲಿ ಪತ್ನಿ ಮೇಲೆ ವಿಶೇಷ ಕಾಳಜಿವಹಿಸಿದ್ದಾರೆ. ಆರ್ ಸಿಬಿ ಪಂದ್ಯದ ಸಂದರ್ಭದಲ್ಲಿ ಮೈದಾನಕ್ಕೆ ಬಂದು ಪತಿಗೆ ಚಿಯರ್ ಅಪ್ ಮಾಡುವ ಅನುಷ್ಕಾ ಭಾನುವಾರವೂ ಅದೇ ರೀತಿ ಬಂದಿದ್ದರು. ಈ ನಡುವೆ ಕೊಹ್ಲಿ ಕೈ ಸನ್ನೆಯಲ್ಲೇ ಊಟ ಮಾಡಿದ್ಯಾ ಎಂದು ಕೇಳಿದ್ದಾರೆ. ಇದಕ್ಕೆ ಅನುಷ್ಕಾ ಕೂಡಾ ಮಾಡಿದೆ ಎಂದು ನಗು ನಗುತ್ತಲೇ ಉತ್ತರಿಸುತ್ತಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.