Select Your Language

Notifications

webdunia
webdunia
webdunia
webdunia

ಈ ಕಾರಣದಿಂದ ಮಹಿಳೆಯ ಮೇಲೆ ಬಿಸಿ ಕಬ್ಬಿಣದ ರಾಡ್ ನಿಂದ ಹಲ್ಲೆ

ಈ ಕಾರಣದಿಂದ ಮಹಿಳೆಯ ಮೇಲೆ  ಬಿಸಿ ಕಬ್ಬಿಣದ ರಾಡ್ ನಿಂದ ಹಲ್ಲೆ
ಅಜ್ಮೀರ್ , ಗುರುವಾರ, 3 ಡಿಸೆಂಬರ್ 2020 (07:19 IST)
ಅಜ್ಮೀರ್ : 40 ವರ್ಷದ ಮಹಿಳೆಯೊಬ್ಬಳ  ದೇಹದಲ್ಲಿ ಮಾಟಗಾರ್ತಿ ಸೇರಿ ಕೊಂಡಿದ್ದಾಳೆಂದು ಆಕೆಯನ್ನು ಬಿಸಿ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿದ ಘಟನೆ ರಾಜಸ್ಥಾನದ ಭಿಲ್ವಾರಾದ ಶಹಪುರ್ ಬ್ಲಾಕ್ ನ ಕುಂಡಿಯಾ ಗ್ರಾಮದ ದೇವಸ್ಥಾನದಲ್ಲಿ ನಡೆದಿರುವುದಾಗಿ  ವರದಿಯಾಗಿದೆ.

ಮಹಿಳೆಗೆ  ಚಲನಿಯಾ ದೇವಸ್ಥಾನಕ್ಕೆ ಹೋಗಿದ್ದಾಗ ಮಾಟಗಾರ್ತಿ ತನ್ನೊಳಗೆ ಸೇರಿಕೊಂಡಿದ್ದಾಳೆ ಎಂದು ಹೇಳಿದ್ದಾಳೆ. ಈ ಹಿನ್ನಲೆಯಲ್ಲಿ  ಆಕೆಯ ದೇಹದಿಂದ ಮಾಟಗಾರ್ತಿಯನ್ನು ಹೊರಹಾಕಲು ಐವರು ಸೇರಿ ಆಕೆಯನ್ನು ದೇವಾಲಯದೊಳಗೆ ಕರೆದುಕೊಂಡು ಹೋಗಿ ಬಿಸಿ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿದ್ದಾರೆ. ಇದರಿಂದ ಮಹಿಳೆ ಮೂರ್ಛೆ ತಪ್ಪಿ ಕೆಳಗೆ ಬಿದ್ದಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಳಿಸಲಾಗಿದೆ.

ಈ ಬಗ್ಗೆ ಮಹಿಳೆಯ ಸಂಬಂಧಿಕರು ಸೇರಿದಂತೆ ಐವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತನಗೆ ಮೋಸ ಮಾಡಿದ ಪ್ರೇಮಿಯ ಪತ್ನಿಯ ಕಣ್ಣಿಗೆ ಫೆವಿ ಕ್ವಿಕ್ ಗಮ್ ಸುರಿದ ಹುಡುಗಿ