Select Your Language

Notifications

webdunia
webdunia
webdunia
webdunia

ತನಗೆ ಮೋಸ ಮಾಡಿದ ಪ್ರೇಮಿಯ ಪತ್ನಿಯ ಕಣ್ಣಿಗೆ ಫೆವಿ ಕ್ವಿಕ್ ಗಮ್ ಸುರಿದ ಹುಡುಗಿ

ತನಗೆ ಮೋಸ ಮಾಡಿದ ಪ್ರೇಮಿಯ ಪತ್ನಿಯ ಕಣ್ಣಿಗೆ ಫೆವಿ ಕ್ವಿಕ್ ಗಮ್ ಸುರಿದ ಹುಡುಗಿ
ಬಿಹಾರ , ಗುರುವಾರ, 3 ಡಿಸೆಂಬರ್ 2020 (07:13 IST)
ಬಿಹಾರ : ಹುಡುಗಿಯೊಬ್ಬಳು ತನ್ನ ಪ್ರೇಮಿಯ ಪತ್ನಿಯ ಕೂದಲನ್ನು ಕತ್ತರಿಸಿ ಆಕೆಯ ಕಣ್ಣಿಗೆ ಫೆವಿ ಕ್ವಿಕ್ ಗಮ್ ಸುರಿದ ಘಟನೆ ಬಿಹಾರದಲ್ಲಿ ನಡೆದಿದೆ.

ಹುಡುಗಿ ತನ್ನ ಗೆಳೆಯ ಬೇರೆ ಹುಡುಗಿಯೊಂದಿಗೆ ಮದುವೆಯಾಗಿದ್ದಕ್ಕೆ ಕೋಪಗೊಂಡಿದ್ದಳು. ಆ ಕಾರಣದಿಂದ ಹುಡುಗಿ ರಾತ್ರಿ ಮಲಗಿದ್ದಾಗ ಗೆಳೆಯನ ಕೋಣೆಗೆ ನುಗ್ಗಿ ಪತ್ನಿಯ ಕೂದಲನ್ನು ಕತ್ತರಿಸಿ ಆಕೆಯ ಕಣ್ಣಿಗೆ ಫೆವಿ ಕ್ವಿಕ್ ಗಮ್ ಸುರಿದು ಪರಾರಿಯಾಗಲು ಯತ್ನಿಸಿದ್ದಾಳೆ. ಆ ವೇಳೆ ಸಂತ್ರಸ್ತೆ ಕೂಗಿಕೊಂಡ ಕಾರಣ ಮನೆಯವರೆಲ್ಲ ಆಕೆಯನ್ನು ಹಿಡಿದಿದ್ದಾರೆ.

ಬಳಿಕ ಆರೋಪಿ ಹುಡುಗಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಕಣ್ಣು ಸುಟ್ಟು ಹೋಗಿದ್ದು, ಕಣ್ಣು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಾತ್ರೆಗೆ ಮುಗಿಸಿ ಮನೆಗೆ ಬರುತ್ತಿದ್ದ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ!