Select Your Language

Notifications

webdunia
webdunia
webdunia
webdunia

ಮದುವೆಗೆ ತೆರಳುತ್ತಿದ್ದ ಮಹಿಳೆಗೆ ಕಿರುಕುಳ ನೀಡಿದ ಪೊಲೀಸ್

ಮದುವೆಗೆ ತೆರಳುತ್ತಿದ್ದ ಮಹಿಳೆಗೆ ಕಿರುಕುಳ ನೀಡಿದ ಪೊಲೀಸ್
ಉತ್ತರ ಪ್ರದೇಶ , ಬುಧವಾರ, 2 ಡಿಸೆಂಬರ್ 2020 (08:54 IST)
ಉತ್ತರ ಪ್ರದೇಶ : ಮದುವೆಗೆ ತೆರಳುತ್ತಿದ್ದ ಮಹಿಳೆಗೆ ಪೊಲೀಸ್ ಒಬ್ಬ ಕಿರುಕುಳ, ನಿಂದನೆ ಮಾಡಿದ್ದಲ್ಲದೇ ಇದನ್ನು ವಿರೋಧಿಸಿದ ವ್ಯಕ್ತಿಯ ಮೇಲೆ ಗುಂಡುಹಾರಿಸಿದ ಘಟನೆ ಉತ್ತರಪ್ರದೇಶದ ಅಜಮ್ ಗರ್ ನಲ್ಲಿ ನಡೆದಿದೆ.

ರಜೆಯಲ್ಲಿದ್ದ ಪೊಲೀಸ್ ಮದ್ಯ ಸೇವಿಸಿ ತನ್ನ ಸ್ನೇಹಿತರ ಜೊತೆ ಸೇರಿ ಮಹಿಳೆಯೊಬ್ಬಳು ಆಕೆಯ ಸಂಬಂಧಿಕರೊಬ್ಬನ ಜೊತೆ ಮದುವೆಗೆ ತೆರಳುತ್ತಿದ್ದಾಗ, ಕಿರುಕುಳ, ನಿಂದನೆ ಮಾಡಿದ್ದಾನೆ. ಇದನ್ನು ಮಹಿಳೆಯ ಜೊತೆ ಇದ್ದ ವ್ಯಕ್ತಿ ವಿರೋಧ ವ್ಯಕ್ತಪಡಿಸಿದ್ದಕ್ಕೆ ಇಬ್ಬರ ನಡುವೆ ಜಗಳ ನಡೆದು ಆರೋಪಿ ಪೊಲೀಸ್ ವ್ಯಕ್ತಿಯ ಮೇಲೆ ಗುಂಡು ಹಾರಿಸಿದ್ದಾನೆ.  

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಫಿಗಳನ್ನು ಬಂಧಿಸಿದ್ದಾರೆ ಮತ್ತು ಆರೋಪಿ ಪೊಲೀಸ್ ಹೆಸರನ್ನು ಗೂಂಡಾ ಲಿಸ್ಟ್ ಗೆ ಕಳುಹಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಗೆ ಎಚ್ ಐವಿ ಪಾಸಿಟಿವ್ ಇದೆ ಎಂದು ತಿಳಿದ ಪತಿ ಮಾಡಿದ್ದೇನು ಗೊತ್ತಾ?