Select Your Language

Notifications

webdunia
webdunia
webdunia
Tuesday, 8 April 2025
webdunia

ಆರೋಗ್ಯದಲ್ಲಿ ಏರುಪೇರು: ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಆಸ್ಪತ್ರೆಗೆ ದಾಖಲು

pratibha patil

Sampriya

Pune , ಗುರುವಾರ, 14 ಮಾರ್ಚ್ 2024 (16:22 IST)
ಪುಣೆ: ಅನಾರೋಗ್ಯದ ಹಿನ್ನೆಲೆ ಭಾರತದ  ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಪುಣೆಯ ಭಾರತಿ ಆಸ್ಪತ್ರೆಗೆ ದಾಖಲಿಸಲಾಗಿದೆ. 
 
ಜ್ವರ ಹಾಗೂ ಎದೆಯಲ್ಲಿ ಸೋಂಕು ಕಾಣಿಸಿಕೊಂಡ ಕಾರಣ ಬುಧವಾರ ರಾತ್ರಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಅವರ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆಯನ್ನು ಮುಂದುವರೆಸಲಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
 
ಪ್ರತಿಭಾ ಪಾಟೀಲ್ ಅವರು 12 ರಾಷ್ಟ್ರಪತಿಯಾಗಿ 2007ರಿಂದ 2012ರ ವರೆಗೆ ಸೇವೆ ಸಲ್ಲಿಸಿದರು. ಇವರು ದೇಶದ ಮೊದಲ ಮಹಿಳಾ ರಾಷ್ಟ್ರಪತಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. 
 
ಈ ಹಿಂದೆ 1991ರಿಂದ 1996ರ ವರೆಗೆ ಮಹಾರಾಷ್ಟ್ರದ ಅಮರಾವತಿಯಿಂದ ಸಂಸದೆಯಾಗಿ ಲೋಕಸಭೆಗೆ ಆಯ್ಕೆಯಾದರು.  2004ರಿಂದ 2007ರ ವರೆಗೆ ರಾಜಸ್ತಾನದ ರಾಜ್ಯಪಾಲೆಯಾಗಿ ಸೇವೆ ಸಲ್ಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಾ ಸಿಎನ್ ಮಂಜುನಾಥ್ ‘ಜಾಣ ಅಳಿಯ’ನೆಂದ ಡಿಕೆ ಸುರೇಶ್