Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಸರ್ಕಾರ ಉಳಿಯಲ್ಲ- ಯುವಮೋರ್ಚಾ ಅಧ್ಯಕ್ಷ ಧೀರಜ್ ಮುನಿರಾಜು

congress

geetha

bangalore , ಗುರುವಾರ, 1 ಫೆಬ್ರವರಿ 2024 (18:42 IST)
ಬೆಂಗಳೂರು-ಮಾಗಡಿ ಶಾಸಕ ಬಾಲಕೃಷ್ಣ ಹೇಳಿಕೆ ವಿಚಾರವಾಗಿ ನಗರದಲ್ಲಿ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಧೀರಜ್ ಮುನಿರಾಜು ಪ್ರತಿಕ್ರಿಯಿಸಿದ್ದಾರೆ.ನಾವೆಲ್ಲಾ ಶಾಸಕರಾದ ಮೊದಲ ದಿನದಿಂದ ವಿಧಾನಸೌಧದಲ್ಲಿ ಪ್ರತಿಭಟನೆ ಮಾಡಿದ್ದೆವು.ಇವರದ್ದು ಬೋಗಸ್ ಗ್ಯಾರಂಟಿ ಅಂತ.ಬ್ಲಾಕ್ ಮೇಲ್ ರಾಜಕಾರಣ ಮಾಡ್ತಿದ್ದಾರೆ.ನೀವು ಓಟ್ ಕೊಟ್ರೆ ಗ್ಯಾರಂಟಿ ಕೊಡ್ತೀವಿ, ಇಲ್ಲದಿದ್ರೆ ವಾಪಸ್ ತಗೋತೀವಿ ಅಂತ.ಮತದಾರರಿಗೆ ಬೆದರಿಸೋ ಕೆಲಸ ಮಾಡ್ತಿದ್ದಾರೆ.ಎಷ್ಟು ಜನರಿಗೆ ಗ್ಯಾರಂಟಿ ತಲುಪುತ್ತಿದೆ.ಐದು ಕೆಜಿ ಅಕ್ಕಿ ಅಕ್ಕಿಯನ್ನ ಕೇಂದ್ರದಿಂದ ಕೊಡ್ತಿದ್ದಾರೆ.ಆದ್ರೆ ಇವರು ಮೂರು ಕೆ.ಜಿ ಅಕ್ಕಿ ಕೊಟ್ಟು, ಎರಡು ಕೆಜಿ ರಾಗಿ ಕೊಡ್ತಿದ್ದಾರೆ.ಐದು ಕೆಜಿ ಅಕ್ಕಿ ಕೊಡಬಹುದಲ್ವಾ.?ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
 
ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಬಿಜೆಪಿ ಅಲೆ ಶುರುವಾಗಿದೆ.ಹಾಗಾಗಿ ಹೆದರಿ ಈ ರೀತಿ ಹೇಳ್ತಿದ್ದಾರೆ.ಎಂಟು ತಿಂಗಳಲ್ಲಿ ಅಭಿವೃದ್ಧಿ ಶೂನ್ಯ ಇವರ ಆಡಳಿತ.ದೊಡ್ಡಬಳ್ಳಾಪುರದಲ್ಲಿ ಹೋರಾಟ ಮಾಡಿದ್ದೇವೆ.ರೈತರಿಗೆ ಬರ ಪರಿಹಾರ ನೀಡಿಲ್ಲ.ಡರಡು ಸಾವಿರ ಪರಿಹಾರ ಬೇಡ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಅವಶ್ಯಕತೆ ಇರೋದಕ್ಕೆ ಇವರು ಕೊಡ್ತಿಲ್ಲ.
 
ಅಕ್ಷತೆ ಬೇಕಾ, ಅಕ್ಕಿ ಬೇಕಾ‌ ಅನ್ನೋ ವಿಚಾರವಾಗಿ ಅಕ್ಷತೆ ಬೇಕಾ.? ಗ್ಯಾರಂಟಿ ಬೇಕಾ.? ಈ ರೀತಿ ಕೇಳಿದ್ದಾರೆ.ಕಾಂಗ್ರೆಸ್ ಸೋಲನ್ನ ಒಪ್ಪಿಕೊಂಡಂತಾಗಿದೆ.ಜನರನ್ನ ಬ್ಲಾಕ್ ಮೇಲೆ ಮಾಡ್ತಿದ್ದಾರೆ.ಕಾಂಗ್ರೆಸ್ ಸರ್ಕಾರ ಲೋಕಸಭಾ ಚುನಾವಣೆ ಬಳಿಕ ಉಳಿಯಲ್ಲ.ಹನುಮಂತನ ಬಾಲಕ್ಕೆ ಬೆಂಕಿ ಹಚ್ಚಿದ್ದಾರೆ.ಇವರ ಸರ್ಕಾರ ಉಳಿಯಲ್ಲ ಎಂದು ಯುವಮೋರ್ಚಾ ಅಧ್ಯಕ್ಷ ಧೀರಜ್ ಮುನಿರಾಜು  ಹೇಳಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಕಾಲೇಜು ವಿದ್ಯಾರ್ಥಿ ಆರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ