Publish Date: Mon, 17 Apr 2023 (14:07 IST)
Updated Date: Mon, 17 Apr 2023 (14:17 IST)
ದುಬೈ : ದುಬೈನ ದೇರಾ ಬುರ್ಜ್ ಮುರಾರ್ ಪ್ರದೇಶದ ಅಪಾರ್ಟ್ಮೆಂಟ್ನಲ್ಲಿ ನಡೆದ ಬೆಂಕಿ ಅವಘಡದಲ್ಲಿ ನಾಲ್ವರು ಭಾರತೀಯರು ಸೇರಿದಂತೆ 16 ಮಂದಿ ಜನರು ಸಾವನ್ನಪ್ಪಿದ್ದಾರೆ.
ನಗರದ ಹಳೆಯ ಭಾಗದಲ್ಲಿರುವ ಅಲ್-ರಾಸ್ ಸಮೀಪವಿರುವ ಕಟ್ಟಡದ 4ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮೂಲಗಳ ಪ್ರಕಾರ ಕೇರಳ ಮತ್ತು ತಮಿಳುನಾಡಿನ ತಲಾ ಇಬ್ಬರು ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಮೃತರನ್ನು ಕೇರಳ ಮೂಲದ ರಿಜೇಶ್ (38) ಮತ್ತು ಅವರ ಪತ್ನಿ ಜಿಶಿ (32) ಹಾಗೂ ಇನ್ನಿಬ್ಬರು ತಮಿಳುನಾಡು ಮೂಲದ ಅಬ್ದುಲ್ ಖಾದರ್ ಮತ್ತು ಸಲಿಯಾಕುಂಡ್ ಎಂದು ಗುರುತಿಸಲಾಗಿದೆ.
ಮೃತರು ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಕೇರಳದ ದಂಪತಿ ಹಾಗೂ ತಮಿಳುನಾಡಿನ ಇಬ್ಬರು ವ್ಯಕ್ತಿಗಳಾಗಿದ್ದರು. ಜೊತೆಗೆ 3 ಪಾಕಿಸ್ತಾನಿ ಸೋದರಸಂಬಂಧಿಗಳು ಮತ್ತು ನೈಜೀರಿಯಾದ ಮಹಿಳೆಯೂ ಬೆಂಕಿ ಅವಘಡದಲ್ಲಿ ಮೃತಪಟ್ಟಿದ್ದಾರೆ. ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಅಗ್ನಿ ಶಾಮಕ ದಳವು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯವನ್ನು ಆರಂಭಿಸಿತು. ಈ ವೇಳೆ 10ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ.