Select Your Language

Notifications

webdunia
webdunia
webdunia
webdunia

ಕಾರು-ಬಸ್ ನಡುವೆ ಭೀಕರ ಅಪಘಾತ, ಐವರ ಸಾವು!

ಅಪಘಾತ
ತುಮಕೂರು , ಶನಿವಾರ, 15 ಏಪ್ರಿಲ್ 2023 (09:48 IST)
ತುಮಕೂರು : ರಾಷ್ಟ್ರೀಯ ಹೆದ್ದಾರಿ 48ರ ನಂದಿಹಳ್ಳಿ ಸಮೀಪ ಶುಕ್ರವಾರ ಇನ್ನೊವಾ ಕಾರಿಗೆ ಖಾಸಗಿ ಬಸ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
 
ಮೃತರನ್ನು ಬೆಂಗಳೂರಿನ ವಿಜಯನಗರ ನಿವಾಸಿ ಕೆಎಸ್ಸಿಸಿಎಫ್ ಸಂಸ್ಥೆ ವ್ಯವಸ್ಥಾಪಕ ಗೋವಿಂದ ನಾಯಕ್ (58), ಪತ್ನಿ ತಿಪ್ಪಮ್ಮ (52), ಅವರ ಸಂಬಂಧಿಕರ ಮಕ್ಕಳಾದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಜಾಜೂರು ಗ್ರಾಮದ ದಿನೇಶ್ (12), ಪಿಂಕಿ (15) ಹಾಗೂ ಕಾರು ಚಾಲಕ ಕುಣಿಗಲ್ನ ರಾಜೇಶ್ (40) ಎಂದು ಗುರುತಿಸಲಾಗಿದೆ. 

ಬೆಂಗಳೂರಿನಿಂದ ಜಾಜೂರು ಗ್ರಾಮಕ್ಕೆ ಸಂಬಂಧಿಕರ ಮಕ್ಕಳನ್ನು ಕರೆದುಕೊಂಡು ಗೋವಿಂದ ನಾಯಕ್ ತೆರಳುತ್ತಿದ್ದರು. ತುಮಕೂರು ಕಡೆಯಿಂದ ಬಂದ ಖಾಸಗಿ ಬಸ್ ರಸ್ತೆ ಡಿವೈಡರ್ಗೆ ಗುದ್ದಿ, ಪಕ್ಕದ ರಸ್ತೆಗೆ ಬಂದು ಕಾರಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಬಿಐ ವಿಚಾರಣೆಗೆ ಹಾಜರಾಗುವಂತೆ ಕೇಜ್ರಿವಾಲ್‌ಗೆ ಸಮನ್ಸ್