Select Your Language

Notifications

webdunia
webdunia
webdunia
webdunia

ಸ್ಫೋಟ : ಡೈರಿ ಫಾರ್ಮ್ನಲ್ಲಿದ್ದ 18,000 ಹಸುಗಳು ಸಾವು!

ಸ್ಫೋಟ : ಡೈರಿ ಫಾರ್ಮ್ನಲ್ಲಿದ್ದ 18,000 ಹಸುಗಳು ಸಾವು!
ವಾಷಿಂಗ್ಟನ್ , ಶುಕ್ರವಾರ, 14 ಏಪ್ರಿಲ್ 2023 (07:22 IST)
ವಾಷಿಂಗ್ಟನ್ : ಡೈರಿ ಫಾರ್ಮ್ ಒಂದರಲ್ಲಿ ಸಂಭವಿಸಿದ ಭಾರೀ ಸ್ಫೋಟದಿಂದಾಗಿ ಅದರಲ್ಲಿದ್ದ ಬರೋಬ್ಬರಿ 18 ಸಾವಿರ ಹಸುಗಳು ಸಾವನ್ನಪ್ಪಿರುವ ಭೀಕರ ಘಟನೆ ಅಮೆರಿಕದ ಟೆಕ್ಸಾಸ್ನಲ್ಲಿ ನಡೆದಿದೆ.

ಸ್ಫೋಟ ಸ್ಥಳೀಯ ಕುಟುಂವೊಂದರ ಡೈರಿ ಫಾರ್ಮ್ನಲ್ಲಿ ನಡೆದಿದೆ. ಸ್ಫೋಟಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆ ಬಗ್ಗೆ ಡೈರಿಯ ಮಾಲೀಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.

ಸ್ಫೋಟಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ಫೋಟೋಗಳು ಹರಿದಾಡಿವೆ. ಸ್ಫೋಟದ ಬಳಿಕ ಸ್ಥಳದಲ್ಲಿ ಭಾರೀ ಬೆಂಕಿ ಉದ್ಭವವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು ಧಾವಿಸಿದ್ದು, ಫಾರ್ಮ್ನಲ್ಲಿ ಸಿಲುಕಿಕೊಂಡಿದ್ದ ಒಬ್ಬ ವ್ಯಕ್ತಿಯನ್ನು ರಕ್ಷಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪದ್ಮನಾಭನಗರದಲ್ಲಿ ಕೈ ಅಭ್ಯರ್ಥಿ ಬದಲಾವಣೆಗೆ ಡಿಕೆಶಿ ಸರ್ಕಸ್