Select Your Language

Notifications

webdunia
webdunia
webdunia
webdunia

ಅಮೆರಿಕದಲ್ಲಿ ಭೀಕರ ಸುಂಟರಗಾಳಿಗೆ 23 ಮಂದಿ ಬಲಿ!

ಅಮೆರಿಕದಲ್ಲಿ ಭೀಕರ ಸುಂಟರಗಾಳಿಗೆ 23 ಮಂದಿ ಬಲಿ!
ವಾಷಿಂಗ್ಟನ್ , ಬುಧವಾರ, 29 ಮಾರ್ಚ್ 2023 (11:32 IST)
ವಾಷಿಂಗ್ಟನ್ : ಅಮೆರಿಕದ ಪಶ್ಚಿಮ ಮಿಸಿಸಿಪ್ಪಿಯ 200 ಜನರಿರುವ ಪಟ್ಟಣವಾದ ಸಿಲ್ವರ್ ಸಿಟಿ ಹಾಗೂ ಅಲ್ಬಾಮಾ ಪ್ರಾಂತ್ಯಗಳಲ್ಲಿ ಸಂಭವಿಸಿದ ಭೀಕರ ಸುಂಟರಗಾಳಿಗೆ ಕನಿಷ್ಠ 23 ಮಂದಿ ಬಲಿಯಾಗಿದ್ದಾರೆ. ನಾಲ್ವರು ಕಾಣೆಯಾಗಿದ್ದು, ರಕ್ಷಣಾ ಕಾರ್ಯಾಚಾರಣೆ ನಡೆಯುತ್ತಿದೆ.
 
ಭೀಕರ ಗಾಳಿಯ ಹೊಡೆತಕ್ಕೆ ಅನೇಕ ದೈತ್ಯ ಕಟ್ಟಡಗಳು ಧರೆಗುರುಳಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮಿಸಿಸಿಪ್ಪಿ ಪ್ರಾಂತ್ಯದ ಗ್ರಾಮೀಣ ಪ್ರದೇಶವಾದ ಸಿಲ್ವಿರ್ ಸಿಟಿ ಮತ್ತು ರೋಲಿಂಗ್ ಫೋರ್ಕ್ ಪಟ್ಟಣ ಹಾಗೂ ಜಾಕ್ಸನ್ ನಗರದ ಈಶಾನ್ಯ ಪ್ರದೇಶದಲ್ಲಿ ಹಲವು ಕಟ್ಟಡಗಳು ನೆಲಸಮಗೊಂಡಿವೆ.

ಗಂಟೆಗೆ 100 ಮೈಲುಗಳಿಗಿಂತ ಹೆಚ್ಚು (160 ಕಿಮೀ) ವೇಗದಲ್ಲಿ ಗಾಳಿ ಬೀಸಿದ್ದು, ಸಾಕಷ್ಟು ಹಾನಿಯುಂಟುಮಾಡಿದೆ ಎಂದು ರಾಜ್ಯದ ತುರ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ. ಬದುಕುಳಿದವರಿಗಾಗಿ ರಕ್ಷಣಾ ತಂಡಗಳು ಹುಡುಕಾಟ ನಡೆಸುತ್ತಿವೆ ಎಂದು ಮಿಸ್ಸಿಸ್ಸಿಪ್ಪಿ ತುರ್ತು ನಿರ್ವಹಣಾ ಸಂಸ್ಥೆ ಸರಣಿ ಟ್ವೀಟ್ಗಳಲ್ಲಿ ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯಕರನ ಜೊತೆ ಸೇರಿ ಪತಿಯನ್ನೆ ಮುಗಿಸಿದ ಪತ್ನಿ!?