Select Your Language

Notifications

webdunia
webdunia
webdunia
Monday, 7 April 2025
webdunia

ಪ್ರಿಯಕರನ ಜೊತೆ ಸೇರಿ ಪತಿಯನ್ನೆ ಮುಗಿಸಿದ ಪತ್ನಿ!?

ತನಿಖೆ
ದಾವಣಗೆರೆ , ಬುಧವಾರ, 29 ಮಾರ್ಚ್ 2023 (10:47 IST)
ದಾವಣಗೆರೆ : ಮಾ.23 ರಂದು ದಾವಣಗೆರೆ ರಿಂಗ್ ರಸ್ತೆಯಲ್ಲಿ ಮಹಾಂತೇಶ್ (35) ಎಂಬ ವ್ಯಕ್ತಿಯ ಬರ್ಬರ ಹತ್ಯೆ ಪ್ರಕರಣದ ಸತ್ಯ ತನಿಖೆಯಿಂದ ಹೊರಬಿದ್ದಿದೆ. ಪತ್ನಿ ಶ್ವೇತಾ (27) ಸಂಚು ರೂಪಿಸಿ ಪ್ರಿಯಕರ ಚಂದ್ರಶೇಖರ್ (28) ಜೊತೆ ಸೇರಿ ಹತ್ಯೆ ಮಾಡಿರುವುದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾಳೆ.
 
ಆರೋಪಿ ಚಂದ್ರಶೇಖರ್ ರಾತ್ರಿ ವೇಳೆ ಮಹಾಂತೇಶ್ನನ್ನ ಕರೆದುಕೊಂಡು ಹೋಗಿ ಮದ್ಯದಲ್ಲಿ ನಿದ್ರೆ ಮಾತ್ರೆ ಸೇರಿಸಿ ಕುಡಿಸಿ ಹತ್ಯೆ ಮಾಡಿದ್ದ. ನಂತರ ಶವದ ಮೇಲೆ ಕಾರದಪುಡಿ ಹಾಕಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕುತ್ತಿಗೆ ಕತ್ತರಿಸಿದ್ದ. 

ಹತ್ಯೆಯಾದ ಮಹಾಂತೇಶ್ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬೈಚವಳ್ಳಿ ಗ್ರಾಮದ ನಿವಾಸಿ. ದಾವಣಗೆರೆಯಲ್ಲಿ ಕಟಿಂಗ್ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ. ಶ್ವೇತಾ, ಮೆಡಿಕಲ್ ರೆಪ್ ಆಗಿದ್ದ ಬಾಲ್ಯ ಸ್ನೇಹಿತ ಚಂದ್ರಶೇಖರ್ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು.  ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ವಿದ್ಯಾನಗರ ಠಾಣೆ ಪೊಲೀಸರು ಕೊಲೆ ರಹಸ್ಯವನ್ನು ಬಯಲಿಗೆಳೆದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯುತ್ ಕಡಿತ: ಡಿಸಿಎಂ ಮನೆಗೆ ಬಾಂಬ್ ಬೆದರಿಕೆ ಹಾಕಿದ !