Select Your Language

Notifications

webdunia
webdunia
webdunia
webdunia

ಆಸ್ಪತ್ರೆ ಬಿಲ್ ನೋಡಿ ಯುವಕ ಆತ್ಮಹತ್ಯೆ

ಆಸ್ಪತ್ರೆ ಬಿಲ್ ನೋಡಿ ಯುವಕ ಆತ್ಮಹತ್ಯೆ
ನವದೆಹಲಿ , ಗುರುವಾರ, 23 ಮಾರ್ಚ್ 2023 (07:00 IST)
ನವದೆಹಲಿ : ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಯುವಕನೊಬ್ಬ ಆಸ್ಪತ್ರೆಯ ಬಿಲ್ ನೋಡಿ ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ನವದೆಹಲಿಯಲ್ಲಿ ನಡೆದಿದೆ.

ಮೃತ ಯುವಕನನ್ನು ನಿತೇಶ್ (24) ಎಂದು ಗುರುತಿಸಲಾಗಿದೆ. ಈತ ಖಾಸಗಿ ಹೋಟೆಲ್ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ನಿತೇಶ್ ತನ್ನ ಆರೋಗ್ಯಕ್ಕಾಗಿ ಸಾಕಷ್ಟು ಖರ್ಚು ಮಾಡಿದ್ದನು. ಇದಲ್ಲದೆ ನನ್ನ ಅನಾರೋಗ್ಯದಿಂದ ತನ್ನ ತಂದೆ-ತಾಯಿಗೆ ಆರ್ಥಿಕ ಹೊರೆಯಾಗುವುದು ಬೇಡ ಎಂದು ನಿತೀಶ್ ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡಿದ್ದಾನೆ.  

ದೆಹಲಿಯ ಆದರ್ಶ ನಗರದಲ್ಲಿರುವ ಖಾಸಗಿ ಹೋಟೆಲೊಂದರಲ್ಲಿ ನಿತೇಶ್ ಮೃತದೇಹ ಪ್ಲಾಸ್ಟಿಕ್ನಿಂದ ಮುಖ ಮುಚ್ಚಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆಕ್ಸಿಜನ್ ಗ್ಯಾಸ್ ಬಳಸಿಕೊಂಡು ಆತ್ನಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯಾದ್ಯಂತ ಶುಕ್ರವಾರದಿಂದ ರಂಜಾನ್ ಉಪವಾಸ ಆರಂಭ