Select Your Language

Notifications

webdunia
webdunia
webdunia
webdunia

ಅಪರಾಧಿಗಳ ಬಿಡುಗಡೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸುಪ್ರೀಂ ಒಪ್ಪಿಗೆ

ಅಪರಾಧಿಗಳ ಬಿಡುಗಡೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸುಪ್ರೀಂ ಒಪ್ಪಿಗೆ
ನವದೆಹಲಿ , ಬುಧವಾರ, 22 ಮಾರ್ಚ್ 2023 (15:15 IST)
ನವದೆಹಲಿ : ಗುಜರಾತ್ ಗಲಭೆ ವೇಳೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಬಿಲ್ಕಿಸ್ ಬಾನೋ ಪ್ರಕರಣದ 11 ಅಪರಾಧಿಗಳ ಅವಧಿಗೂ ಮುನ್ನವೇ ಬಿಡುಗಡೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಮನವಿಯನ್ನು ಬುಧವಾರ ಸುಪ್ರೀಂ ಕೋರ್ಟ್ ಪುರಸ್ಕರಿಸಿದೆ. ವಿಚಾರಣೆಗೆ ಹೊಸ ಪೀಠ ರಚಿಸಲು ಅನುಮತಿ ಸೂಚಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್, ನ್ಯಾಯಮೂರ್ತಿ ಪಿ.ಎಸ್ ನರಸಿಂಹ ಹಾಗೂ ಜೆ.ಬಿ ಪರ್ದಿವಾಲಾ ಅವರನ್ನೊಳಗೊಂಡ ಪೀಠವು ಬಿಲ್ಕಿಸ್ ಬಾನೋ ಅವರ ವಕೀಲೆ ಶೋಭಾ ಗುಪ್ತ ಅವರಿಗೆ ಪೀಠವೊಂದನ್ನು ರಚಿಸುವ ಭರವಸೆ ನೀಡಿದೆ. 

2002 ರ ಗುಜರಾತ್ ಗಲಭೆಯಲ್ಲಿ ಬಿಲ್ಕಿಸ್ ಬಾನೋ ಅವರು ಗರ್ಭಿಣಿಯಾಗಿದ್ದಾಗ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದರು. ಅವರ ಮೂರು ವರ್ಷದ ಮಗಳು ಸೇರಿದಂತೆ ಅವರ ಕುಟುಂಬದವರನ್ನು ಕೊಲೆ ಮಾಡಲಾಗಿತ್ತು. ಒಟ್ಟು 11 ಜನರ ವಿರುದ್ಧ ಆರೋಪ ಸಾಬೀತಾಗಿ 2008 ರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಪೆಪ್ಪರ್ ಸ್ಪ್ರೇ ಮಾಡಿ 27 ಸಾವಿರ ದೋಚಿದ ರೌಡಿಶೀಟರ್ ಗಳು..!