Select Your Language

Notifications

webdunia
webdunia
webdunia
webdunia

ಹಿಜಬ್ ಕುರಿತು ಶೀಘ್ರದಲ್ಲಿ ವಿಚಾರಣೆ : ಸಿಜೆಐ

ಹಿಜಬ್ ಕುರಿತು ಶೀಘ್ರದಲ್ಲಿ ವಿಚಾರಣೆ : ಸಿಜೆಐ
ನವದೆಹಲಿ , ಭಾನುವಾರ, 19 ಮಾರ್ಚ್ 2023 (10:06 IST)
ನವದೆಹಲಿ : ಶಾಲಾ-ಕಾಲೇಜುಗಳ ತರಗತಿಗಳಲ್ಲಿ ಹಿಜಬ್ ನಿಷೇಧಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ತ್ರಿ ಸದಸ್ಯ ಪೀಠ ರಚಿಸಿ ಶೀಘ್ರದಲ್ಲೇ ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಭರವಸೆ ನೀಡಿದ್ದಾರೆ.

ಪ್ರಕರಣ ವಿಚಾರಣೆ ನಡೆಸುವಂತೆ ಶುಕ್ರವಾರ ಷರಿಯತ್ ಸಮಿತಿ ಪರವಾಗಿ ವಕೀಲರು ಮನವಿ ಮಾಡಿದರು. ಪರೀಕ್ಷೆಗೆ ಐದು ದಿನಗಳಷ್ಟೆ ಬಾಕಿಯಿದೆ. ವಿದ್ಯಾರ್ಥಿನಿಯರು ಹಿಜಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡಬೇಕು. ಅದಕ್ಕಾಗಿ ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ಶೀಘ್ರದಲ್ಲೇ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದರು. 

 
ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಡಿ.ವೈ ಚಂದ್ರಚೂಡ್, ನೀವೂ ಕೊನೆ ಕ್ಷಣದಲ್ಲಿ ಬಂದು ಮನವಿ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರ ನೀಡಿದ ವಕೀಲರು ಕಳೆದ 10 ದಿನಗಳಲ್ಲಿ ಎರಡು ಬಾರಿ ಈ ಬಗ್ಗೆ ಪ್ರಸ್ತಾಪಿಸಿದೆ. ಅದಾಗ್ಯೂ ನ್ಯಾಯಾಲಯ ಪೀಠವನ್ನು ರಚನೆ ಮಾಡಿಲ್ಲ ಎಂದರು. ಬಳಿಕ ಸಿಜೆಐ ಶೀಘ್ರದಲ್ಲಿ ತ್ರಿ ಸದಸ್ಯ ಪೀಠ ರಚಿಸಿ ವಿಚಾರಣೆ ನಡೆಸುವುದಾಗಿ ಹೇಳಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ದಶಪಥ ರಸ್ತೆ ಮಾಡಿದ್ದೇವೆ, ಎಲ್ಲರೂ ಹೆಮ್ಮೆಪಡಬೇಕು : ಸಿಎಂ