Select Your Language

Notifications

webdunia
webdunia
webdunia
webdunia

ನರಬಲಿ : 10ರ ಬಾಲಕನನ್ನು ಕುಟುಂಬದವರೇ ಕತ್ತು ಸೀಳಿ ಕೊಂದ್ರು!

ನರಬಲಿ : 10ರ ಬಾಲಕನನ್ನು ಕುಟುಂಬದವರೇ ಕತ್ತು ಸೀಳಿ ಕೊಂದ್ರು!
ಲಕ್ನೋ , ಸೋಮವಾರ, 27 ಮಾರ್ಚ್ 2023 (08:57 IST)
ಲಕ್ನೋ : 10 ವರ್ಷದ ಬಾಲಕನನ್ನು ಕುಟುಂಬದವರೇ ನರಬಲಿ ನೀಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಬಾಲಕನನ್ನು ನರಬಲಿ ನೀಡಿದ ಆರೋಪದ ಮೇಲೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
 
ಪಾರ್ಸಾ ಗ್ರಾಮದ ಕೃಷ್ಣ ವರ್ಮಾ ಅವರ ಪುತ್ರ ವಿವೇಕ್ ಗುರುವಾರ ರಾತ್ರಿ ನಾಪತ್ತೆಯಾಗಿದ್ದ. ಬಳಿಕ ಬಾಲಕನಿಗಾಗಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಆದರೆ ಅದೇ ದಿನ ರಾತ್ರಿ ಬಾಲಕ ಶವವಾಗಿ ಸಿಕ್ಕಿದ್ದ. ಗದ್ದೆಯಲ್ಲಿ ಬಾಲಕನ ಕತ್ತು ಸೀಳಿದ ಶವ ಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ತನಿಖೆ ವೇಳೆ ಬಾಲಕನ ಕುಟುಂಬದವರೇ ಆದ ಅನೂಪ್ ಮೇಲೆ ಸಂಶಯ ವ್ಯಕ್ತಪಡಿಸಿದ್ದಾರೆ. ಅನೂಪ್ಗೆ 2 ವರ್ಷದ ಮಗುವಿದ್ದು, ಆತ ಮಾನಸಿಕ ಅಸ್ವಸ್ಥನಾಗಿದ್ದ. ಆತನಿಗೆ ಯಾವುದೇ ಚಿಕಿತ್ಸೆ ಸಕಾರಾತ್ಮಕ ಫಲಿತಾಂಶ ನೀಡದಿದ್ದಾಗ ಅನೂಪ್ ವಾಮಾಚಾರದ ಮೊರೆ ಹೋಗಿದ್ದಾನೆ.  ಅನೂಪ್ಗೆ ವ್ಯಕ್ತಿಯೊಬ್ಬ ನರಬಲಿ ನೀಡುವಂತೆ ಸಲಹೆ ನೀಡಿದ್ದ. ಅದರಂತೆಯೇ ಅನೂಪ್ ವಿವೇಕ್ನ ಚಿಕ್ಕಪ್ಪ ಚಿಂತಾರಾಮ್ ಜೊತೆಗೂಡಿ ಬಾಲಕನನ್ನು ಗುದ್ದಲಿಯಿಂದ ಹೊಡೆದು ಕೊಂದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರಿನಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆಗೆ ಅದ್ದೂರಿ ತೆರೆ