Select Your Language

Notifications

webdunia
webdunia
webdunia
webdunia

ಭೂತ ಬಿಡಿಸುವ ನೆಪದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ!

ಭೂತ ಬಿಡಿಸುವ ನೆಪದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ!
ಲಕ್ನೋ , ಗುರುವಾರ, 5 ಜನವರಿ 2023 (12:32 IST)
ಲಕ್ನೋ : ಭೂತ ಬಿಡಿಸುವ ನೆಪದಲ್ಲಿ ಮಂತ್ರವಾದಿಯೊಬ್ಬ 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಅಶೋಕ್ ಕುಮಾರ್ (45) ಬಂಧಿತ ವ್ಯಕ್ತಿ. ಉತ್ತರ ಪ್ರದೇಶದ ಪಿಪ್ರಿ ಪೊಲೀಸ್ ಠಾಣೆಯ ವ್ಯಾಪ್ತಿ ನಿವಾಸಿಯೊಬ್ಬಳು ಕಳೆದ ಮೂರು ವರ್ಷಗಳಿಂದ ಮೂರ್ಛೆ ರೋಗದಿಂದ ಬಳಲುತ್ತಿದ್ದಳು.

ಈ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ಬಾಲಕಿಯ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿರಲಿಲ್ಲ.

ಈ ಹಿನ್ನೆಲೆಯಲ್ಲಿ ಬಾಲಕಿಯ ತಾಯಿಯ ಬಳಿಗೆ ಬಂದ ಅಶೋಕ್ ಕುಮಾರ್ ಬಾಲಕಿಗೆ ದೆವ್ವ ಹಿಡಿದಿದೆ. ಇದರಿಂದಾಗಿ ಪದೇ ಪದೇ ಪ್ರಜ್ಞೆ ತಪ್ಪಿ ಬೀಳುತ್ತಿದ್ದಾಳೆ.

ಈ ಹಿನ್ನೆಲೆಯಲ್ಲಿ ತನ್ನ ಬಳಿಗೆ ಕಳುಹಿಸಿಕೊಡಿ, ನಾನು ಆ ರೋಗವನ್ನು ಸರಿಪಡಿಸುತ್ತೇನೆ ಎಂದು ಭರವಸೆ ಹುಟ್ಟಿಸಿದ್ದಾನೆ. ಈ ಮಾತನ್ನೇ ನಿಜವೆಂದು ತಿಳಿದ ಬಾಲಕಿಯ ತಾಯಿಯು ತನ್ನ ಮಗಳನ್ನು ಮಂತ್ರವಾದಿಯ ಬಳಿ ಕಳುಹಿಸಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ಕೋವಿಡ್‌ನ 2ನೇ ಬೂಸ್ಟರ್ ಡೋಸ್ ಅಗತ್ಯವಿಲ್ಲ