Publish Date: Mon, 29 Jun 2020 (08:28 IST)
Updated Date: Mon, 29 Jun 2020 (08:56 IST)
ಜಾರ್ಖಂಡ್ : ಮಗ ಸಲಿಂಗಕಾಮಿಯಾಗಿದ್ದ ಕಾರಣ ಸೊಸೆಗೆ ತನ್ನ ಜೊತೆ ಸಂಬಂಧ ಬೆಳೆಸುವಂತೆ ಜಾರ್ಖಂಡ್ ನ ಮಾಜಿ ಡಿಜಿಪಿ ಡಿಕೆ ಪಾಂಡೆ ಒತ್ತಾಯಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಜಾರ್ಖಂಡ್ ನ ಮಾಜಿ ಡಿಜಿಪಿ ಡಿಕೆ ಪಾಂಡೆ ವಿರುದ್ಧ ಅವರ ಸೊಸೆಯೇ ಈ ಗಂಭೀರ ಆರೋಪ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅವರ ಸೊಸೆ ಮಹಿಳಾ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಿದ್ದಾರೆ.
ಡಿಕೆ ಪಾಂಡೆ ಡಿಜಿಪಿಯಾಗಿದ್ದ ವೇಳೆ ಮಹಿಳೆಯರ ಸುರಕ್ಷತೆಗಾಗಿ ಹಾಗೂ ಅವರ ಮೇಲಿನ ಕಿರುಕುಳ ತಡೆಯುವ ನಿಟ್ಟಿನಲ್ಲಿ ಮಹಿಳಾ ಶಕ್ತಿ ಎಂಬ ಆಪ್ ಲಾಂಚ್ ಮಾಡಿದ್ದರು. ಆದರೆ ಇದೀಗ ಅವರ ಸೊಸೆ ಮಾಡಿರುವ ಈ ಆರೋಪದಿಂದ ಅವರ ವ್ಯಕ್ತಿತ್ವಕ್ಕೆ ಕಪ್ಪುಚುಕ್ಕೆಯಾಗಿದೆ ಎನ್ನಲಾಗಿದೆ.