Select Your Language

Notifications

webdunia
webdunia
webdunia
webdunia

ಅನೈತಿಕ ಸಂಬಂಧದಕ್ಕೆ ಅಡ್ಡಿಪಡಿಸಿದ ಮಗನಿಗೆ ತಾಯಿ ಮಾಡಿದ್ದೇನು ಗೊತ್ತಾ?

ಅನೈತಿಕ ಸಂಬಂಧದಕ್ಕೆ ಅಡ್ಡಿಪಡಿಸಿದ ಮಗನಿಗೆ ತಾಯಿ ಮಾಡಿದ್ದೇನು ಗೊತ್ತಾ?
ಧಾರವಾಡ , ಶನಿವಾರ, 27 ಜೂನ್ 2020 (08:24 IST)
ಧಾರವಾಡ : ಅನೈತಿಕ ಸಂಬಂಧದಕ್ಕೆ ಅಡ್ಡಿಪಡಿಸಿದ ಮಗನಕಣ್ಣಿಗೆ ಖಾರದ ಪುಡಿ ಎರಚಿ ತಾಯಿಯೇ ಕೊಲೆ ಮಾಡಿದ ಘಟನೆ ಧಾರವಾಡದ ಹೊರವಲಯದ ನುಗ್ಗಿಕೇರಿ ಗ್ರಾಮದಲ್ಲಿ ನಡೆದಿದೆ.

ಹನುಮಂತ ಪಾಟೀಲ್ ಕೊಲೆಯಾದ ಮಗ. ಈತನ ತಾಯಿಗೆ ಮಹದೇವ ಎಂಬಾತನ ಜೊತೆ ಅನೈತಿಕ ಸಂಬಂಧವಿತ್ತು. ಈ ವಿಚಾರ ತಿಳಿದ ಮಗ ಹನುಮಂತ ಈ ಸಂಬಂಧಕ್ಕೆ ಅಡ್ಡಿಪಡಿಸಿದ. ಈ ಹಿನ್ನಲೆಯಲ್ಲಿ ಮಹದೇವನ ಜೊತೆ ತಾಯಿ ತನ್ನ ಮಗನ ಕಣ್ಣಿಗೆ ಖಾರದ ಪುಡಿ ಎರಚಿ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿದ್ದಾಳೆ.

ಈ ಬಗ್ಗೆ ಧಾರವಾಡ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ತಾಯಿಯ ದುಷ್ಕೃತ್ಯ ಬೆಳಕಿಗೆ ಬಂದಿದೆ. ಈ ಸಂಬಂಧ ತಾಯಿ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಲ್ಯಾಣ ಕರ್ನಾಟಕದ 115 ಖಾಲಿ ಹುದ್ದೆ ಭರ್ತಿಗೆ ಮುಂದಾದ ಸರಕಾರ