Select Your Language

Notifications

webdunia
webdunia
webdunia
webdunia

ತೀವ್ರಗತಿಯಲ್ಲಿ ಆರ್ಥಿಕ ಸಂಕಷ್ಟ!

ತೀವ್ರಗತಿಯಲ್ಲಿ ಆರ್ಥಿಕ ಸಂಕಷ್ಟ!
ಕೊಲಂಬೋ , ಮಂಗಳವಾರ, 31 ಮೇ 2022 (16:07 IST)
ಕೊಲಂಬೋ : ದ್ವೀಪ ರಾಷ್ಟ್ರ ಶ್ರೀಲಂಕಾ ತೀವ್ರಗತಿಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಇಂಧನ ಕೊರತೆಯೊಂದಿಗೂ ಹೋರಾಡುತ್ತಿದೆ.

ಇದೀಗ ನಾಗರಿಕರಿಗೆ ಸಹಾಯ ಮಾಡಲು ಶ್ರೀಲಂಕಾದ ಮುಖ್ಯ ಬಂದರು ಪ್ರದೇಶದಲ್ಲಿ ಉಚಿತ ಬೈಸಿಕಲ್ ಸೇವೆಯನ್ನು ಅನಾವರಣಗೊಳಿಸಲಾಗಿದೆ.

ಶ್ರೀಲಂಕಾದಲ್ಲಿ ನಗದು ಕೊರತೆಯಿರುವ ಕಾರಣ ಇತರ ದೇಶಗಳಿಂದ ತೈಲವನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣ ಇಂಧನ ಚಾಲಿತ ವಾಹನಗಳನ್ನೂ ಜನರಿಂದ ಬಳಸಲು ಸಾಧ್ಯವಾಗುತ್ತಿಲ್ಲ. ಇದೀಗ ದ್ವೀಪ ರಾಷ್ಟ್ರ ಇಂಧನದ ಅವಶ್ಯಕತೆ ಇಲ್ಲದ ಸೈಕಲ್ಗಳನ್ನು ಜನರಿಗೆ ಬಳಸಲು ಉತ್ತೇಜಿಸುತ್ತಿದೆ.

ಡಾಲರ್ ಕೊರತೆಯಿರುವ ಕಾರಣ ಶ್ರೀಲಂಕಾದಲ್ಲಿ ಇಂಧನ ಹಾಗೂ ಇತರ ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಲ್ಲಿನ ವಾಹನ ಚಾಲಕರು ಗ್ಯಾಸ್ ಸ್ಟೇಶನ್ಗಳಲ್ಲಿ ಪಡಿತರ ಇಂಧನ ಪಡೆಯಲು ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲುವ ಪರಿಸ್ಥಿತಿ ಉಂಟಾಗಿದೆ. ಇದೀಗ ಶ್ರೀಲಂಕಾ ಇಂಧನವನ್ನು ಉಳಿಸುವ ಸಲುವಾಗಿ ಜನರಿಗೆ ಸೈಕಲ್ ಬಳಸಲು ಉತ್ತೇಜಿಸುತ್ತಿದೆ. 

ಬಂದರಿನ ಕಡೆ ಬರುವ ಜನರಿಗೆ ಸದ್ಯ ಬಳಕೆಯಾಗದೇ ಇರುವ ರೈಲು ಮಾರ್ಗಗಳನ್ನು ಸೈಕಲ್ ಟ್ರ್ಯಾಕ್ ಆಗಿ ನಿರ್ಮಿಸಲಾಗಿದೆ ಎಂದು ವರದಿಯಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಯಾರೂ ಹೇಳಿದರೂ ಹಸಿರು ಶಾಲು ತೆಗೆಯೋದಿಲ್ಲ: ಕೋಡಿಹಳ್ಳಿ ಚಂದ್ರಶೇಖರ್‌