Select Your Language

Notifications

webdunia
webdunia
webdunia
webdunia

ಪೆಟ್ರೋಲ್‌ ಬೆಲೆ ಕೇಳುದ್ರೆ ಶಾಕ್ ಆಗ್ತೀರ!?

ಪೆಟ್ರೋಲ್‌ ಬೆಲೆ ಕೇಳುದ್ರೆ ಶಾಕ್ ಆಗ್ತೀರ!?
ಕೊಲಂಬೊ , ಬುಧವಾರ, 25 ಮೇ 2022 (09:40 IST)
ಕೊಲಂಬೊ : ಆರ್ಥಿಕ ಬಿಕ್ಕಟ್ಟಿನ ಪೆಟ್ಟಿನಿಂದ ಕಂಗೆಟ್ಟಿರುವ ಶ್ರೀಲಂಕಾದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿದೆ.
 
ಪೆಟ್ರೋಲ್ ಬೆಲೆ ಬರೋಬ್ಬರಿ 420 ರೂ. ಹಾಗೂ ಡೀಸೆಲ್ ಬೆಲೆ 400 ರೂ. ತಲುಪಿದೆ.
ಶ್ರೀಲಂಕಾ ಸರ್ಕಾರ, ಪೆಟ್ರೋಲ್ ಬೆಲೆ ಶೇಕಡಾ 24.3 ಮತ್ತು ಡೀಸೆಲ್ ಬೆಲೆ ಶೇಕಡಾ 38.4 ರಷ್ಟು ಹೆಚ್ಚಿಸಿದೆ.

ಅಗತ್ಯ ವಸ್ತುಗಳ ಖರೀದಿಗೆ ವಿದೇಶಿ ಕರೆನ್ಸಿ ಕೊರತೆ ಕಾರಣದಿಂದಾಗಿ ಶ್ರೀಲಂಕಾ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಪರಿಣಾಮವಾಗಿ ಇಂಧನ ಬೆಲೆಯಲ್ಲೂ ದಾಖಲೆಯ ಏರಿಕೆಯಾಗಿದೆ.

ಏಪ್ರಿಲ್ 19 ರಿಂದ ಎರಡನೇ ಬಾರಿಗೆ ಇಂಧನ ಬೆಲೆ ಏರಿಕೆಯಾಗಿತ್ತು. ಈಗ ಹೆಚ್ಚು ಬಳಕೆಯಾಗುವ ಆಕ್ಟೇನ್ 92 ಪೆಟ್ರೋಲ್ ಬೆಲೆ 420 ರೂ. (1.17 ಡಾಲರ್) ಮತ್ತು ಡೀಸೆಲ್ 400 ರೂ. (1.11 ಡಾಲರ್) ಲೀಟರ್ಗೆ ಸಾರ್ವಕಾಲಿಕ ಗರಿಷ್ಠ ತಲುಪಿದೆ.

ಆಕ್ಟೇನ್ 92 ಪೆಟ್ರೋಲ್ ಪ್ರತಿ ಲೀಟರ್ಗೆ ಶೇಕಡಾ 24.3 (82 ರೂ.) ಮತ್ತು ಡೀಸೆಲ್ ಅನ್ನು ಪ್ರತಿ ಲೀಟರ್ಗೆ ಶೇಕಡಾ 38.4 (111 ರೂ.) ಹೆಚ್ಚಿಸುವ ನಿರ್ಧಾರವನ್ನು ರಾಜ್ಯ ಇಂಧನ ಘಟಕವಾದ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್ (ಅPಅ) ತೆಗೆದುಕೊಂಡಿದೆ. 

ಇಂದು ಮುಂಜಾನೆ 3 ಗಂಟೆಯಿಂದ ಇಂಧನ ಬೆಲೆ ಪರಿಷ್ಕರಣೆಯಾಗಲಿದ್ದು, ಕ್ಯಾಬಿನೆಟ್ ಅನುಮೋದಿಸಿದ ಇಂಧನ ಬೆಲೆ ಸೂತ್ರವನ್ನು ಬೆಲೆಗಳನ್ನು ಪರಿಷ್ಕರಿಸಲು ಅನ್ವಯಿಸಲಾಗಿದೆ ಎಂದು ವಿದ್ಯುತ್ ಮತ್ತು ಇಂಧನ ಸಚಿವ ಕಾಂಚನಾ ವಿಜೆಸ್ಕರ ಟ್ವಿಟರ್ನಲ್ಲಿ ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಹೈಕಮಾಂಡ್ : ಯಾರಿಗೆ ಮೇಲುಗೈ-ಯಾರಿಗೆ ಹಿನ್ನಡೆ?