Publish Date: Sun, 04 Oct 2020 (07:41 IST)
Updated Date: Sun, 04 Oct 2020 (07:43 IST)
ಭೋಪಾಲ್ : ತಪ್ಪಿಗೆ ಶಿಕ್ಷೆ ನೀಡುವ ನೆಪದಲ್ಲಿ ತಂದೆಯೊಬ್ಬ 17 ವರ್ಷದ ಮಗಳ ಮೇಲೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಘಟನೆ ಭೋಪಾಲ್ ನಲ್ಲಿ ನಡೆದಿದೆ.
ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ತಂದೆ ತನ್ನ ಮಗಳು ಏನೇ ತಪ್ಪು ಮಾಡಿದರೂ ಆಕೆಯನ್ನು ಟೆರೆಸ್ ಮೇಲೆ ಕರೆದುಕೊಂಡು ಹೋಗಿ ಬೆತ್ತಲೆಯಾಗಿ ನಿಲ್ಲಿಸಿ ಅವಳನ್ನು ಅನುಚಿತವಾಗಿ ಸ್ಪರ್ಶಿಸಿ, ಬೆಲ್ಟ್ ನಿಂದ ಹೊಡೆಯುತ್ತಿದ್ದ. ಇದಕ್ಕೆ ತಾಯಿ ಕೂಡ ಸಹಕಾರ ನೀಡುತ್ತಿದ್ದಳು ಎನ್ನಲಾಗಿದೆ.
ಈ ಬಗ್ಗೆ ಹುಡುಗಿ ತಂದೆಯ ವಿರುದ್ಧ ಭೋಪಾಲ್ ಪೊಲೀಸರಿಗೆ , ಸಿಎಂ ಸಹಾಯವಾಣಿಗೆ, ಎಡಬ್ಲ್ಯೂಡಬ್ಲ್ಯೂಎ ಗೆ ಇಮೇಲ್ ಮೂಲಕ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಲು ತಂಡ ರಚಿಸಿದ್ದಾರೆ ಎನ್ನಲಾಗಿದೆ.