Select Your Language

Notifications

webdunia
webdunia
webdunia
webdunia

ಎರಡನೇ ಮದುವೆಗೆ ವಿರೋಧಿಸಿದ ಮಗನಿಗೆ ತಂದೆ ಹೀಗಾ ಮಾಡೋದು!

ಎರಡನೇ ಮದುವೆಗೆ ವಿರೋಧಿಸಿದ ಮಗನಿಗೆ ತಂದೆ ಹೀಗಾ ಮಾಡೋದು!
ಅಹಮದಾಬಾದ್ , ಬುಧವಾರ, 23 ಸೆಪ್ಟಂಬರ್ 2020 (15:54 IST)
ಅಹಮದಾಬಾದ್ : ಎರಡನೇ ಮದುವೆಗೆ ವಿರೋಧ ವ್ಯಕ್ತಪಡಿಸಿದ ಮಗನನ್ನು 50 ವರ್ಷದ ತಂದೆ ಕಚ್ಚಿ ಹಲ್ಲೆ ಮಾಡಿದ ಘಟನೆ ಅಹಮದಾಬಾದಿನ ದರಿಯಾಪುರ ಪ್ರದೇಶದಲ್ಲಿ ನಡೆದಿದೆ.

ಯಾಹ್ಯಾ ಶೇಖ್ ತಂದೆಯಿಂದ ಹಲ್ಲೆಗೊಳಗಾದ ಮಗ. ಈತನ ತಂದೆ ಪತ್ನಿ ಹಾಗೂ ಮಗನ ಸಂಬಂಧ ಕಡಿದುಕೊಂಡು ಮನೆಯ ಮೇಲಿನ ಮಹಡಿಯಲ್ಲಿ ವಾಸಿಸುತ್ತಿದ್ದರು. ಆದರೆ ಎರಡನೇ ಮದುವೆಯಾಗುವುದಾಗಿ ಮಗನ ಬಳಿ ಹೇಳಿದ್ದಾರೆ. ಇದಕ್ಕೆ ಮಗ ವಿರೋಧ ವ್ಯಕ್ತಪಡಿಸಿದ್ದಾನೆ. ಇದರಿಂದ ಕೋಪಗೊಂಡ ತಂದೆ ಮಗನ ದೇಹದ ಭುಜ, ಕೆನ್ನೆ ಮತ್ತು ಬೆನ್ನಿನ ಮೇಲೆ ಕಚ್ಚಿ ಗಾಯಮಾಡಿದ್ದಾನೆ.

ಈ ಬಗ್ಗೆ ಮಗ ತಂದೆಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭೂತ ಬಿಡಿಸುತ್ತೇನೆಂದು ಮನೆಗೆ ಕರೆಸಿ ಮಹಿಳೆಗೆ ಹೀಗೆ ಮಾಡೋದಾ?!