Select Your Language

Notifications

webdunia
webdunia
webdunia
webdunia

ಭೂತ ಬಿಡಿಸುತ್ತೇನೆಂದು ಮನೆಗೆ ಕರೆಸಿ ಮಹಿಳೆಗೆ ಹೀಗೆ ಮಾಡೋದಾ?!

ಭೂತ ಬಿಡಿಸುತ್ತೇನೆಂದು ಮನೆಗೆ ಕರೆಸಿ ಮಹಿಳೆಗೆ ಹೀಗೆ ಮಾಡೋದಾ?!
ನವದೆಹಲಿ , ಬುಧವಾರ, 23 ಸೆಪ್ಟಂಬರ್ 2020 (11:14 IST)
ನವದೆಹಲಿ: ನಿನ್ನ ಮೈಗೆ ದುಷ್ಟ ಶಕ್ತಿಯ ಆಗಮನವಾಗಿದೆ. ನನ್ನ ಮನೆಗೆ ಬಂದರೆ ಅದನ್ನು ಬಿಟ್ಟು ಓಡಿಸುತ್ತೇನೆ ಎಂದು ಮಹಿಳೆಯೊಬ್ಬಳು ನೆರೆಮನೆಯ ಮಹಿಳೆಯನ್ನು ಮನೆಗೆ ಕರೆಸಿ ಯರ್ರಾ ಬಿರ್ರಿ ಥಳಿಸಿದ ಘಟನೆ ನೋಯ್ಡಾದಲ್ಲಿ ನಡೆದಿದೆ.


ಥಳಿತಕ್ಕೊಳಗಾದ ಮಹಿಳೆ ಈಗಾಗಲೇ ಆಕೆಯ ಮನೋರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಆಕೆಯ ಪತಿ ತಿಳಿಸಿದ್ದಾರೆ. ಈ ನಡುವೆ ಆಕೆಯನ್ನು ಮನೆಗೆ ಕರೆದ ಆರೋಪಿ ಮಹಿಳೆ ನಿನ್ನ ಮೈಗೆ ದುಷ್ಟ ಶಕ್ತಿ ಬಂದಿದೆ. ಅದನ್ನು ಹೋಗಲಾಡಿಸುವುದು ನನಗೆ ಗೊತ್ತು ಎಂದು ಮನೆಗೆ ಕರೆಸಿ ಆಕೆಯನ್ನು ಕಟ್ಟಿ ಹಾಕಿ ಕೋಲಿನಿಂದ ಚೆನ್ನಾಗಿ ಬಾರಿಸಿದ್ದಾಳೆ. ನೋವು ತಡೆಯಲಾಗದೇ ಮಹಿಳೆ ಕಿರುಚಾಡಿದ್ದಾಳೆ. ಆಕೆಯ ಕಿರುಚಾಟ ಕೇಳಿ ಅನುಮಾನಗೊಂಡು ಅಲ್ಲಿಗೆ ಹೋದ ಪತಿ ಆಕೆಯನ್ನು ರಕ್ಷಿಸಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗುವಿನ ಲಿಂಗ ಪತ್ತೆಗೆ ಪತ್ನಿಗೆ ಹಿಗ್ಗಾ ಮುಗ್ಗಾ ಹೊಡೆದ! ಕೊನೆಗೆ ಆಗಿದ್ದೇನು?