Publish Date: Fri, 02 Oct 2020 (11:32 IST)
Updated Date: Fri, 02 Oct 2020 (11:47 IST)
ರಾಯ್ ಪುರ : ಇಬ್ಬರು ಸಹೋದರಿಯರು ತಮ್ಮ ತಂದೆಯಿಂದಲೇ 7 ವರ್ಷಗಳ ಕಾಲ ಅತ್ಯಾಚಾರಕ್ಕೊಳಗಾದ ಘಟನೆ ಚತ್ತೀಸ್ ಗಢದ ಬಿಲಾಸ್ಪುರದಲ್ಲಿ ನಡೆದಿದೆ.
ತಾಯಿ ಮನೆ ಬಿಟ್ಟು ಹೋದ ಕಾರಣ ಅವರು ತಂದೆಯ ಆಶ್ರಯದಲ್ಲಿ ವಾಸಿಸುತ್ತಿದ್ದರು. ಆದರೆ ತಂದೆಯ ಕ್ರೌರ್ಯವನ್ನು ಪೊಲೀಸರಿಗೆ ತಿಳಿಸಲು ಹೆದರುತ್ತಿದ್ದರು. ಆದರೆ ಅವರ ಸಹೋದರ ತಂದೆಯ ಕೃತ್ಯದಿಂದ ಬೇಸರಗೊಂಡು ಮಹಿಳಾ ಸಹಾಯವಾಣಿಗೆ ಕರೆ ಮಾಡಿ ತಂದೆಯೇ ನಿರಂತರ ಅತ್ಯಾಚಾರ ಎಸಗುತ್ತಿರುವುದನ್ನು ತಿಳಿಸಿದ್ದಾನೆ.
ಆದರೆ ಸಹೋದರಿಯರು ಈ ಕೃತ್ಯದ ಬಗ್ಗೆ ಹೇಳಲು ಹೆದರುತ್ತಿದ್ದರು. ಆದಕಾರಣ ಬಳಿಕ ಅಧಿಕಾರಿಗಳು ಅವರಿಬ್ಬರಿಗೆ ಕೌನ್ಸೆಲಿಂಗ್ ಮಾಡಿದಾಗ ಅವರು ಸತ್ಯಾಂಶ ತಿಳಿಸಿದ್ದಾರೆ. ಈ ಬಗ್ಗೆ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.